ದ.ಕ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾಗೆ 7 ಮಂದಿ ಬಲಿ!? ನಿಲ್ಲದ ಕೊರೊನಾ `ಮರಣ ಮೃದಂಗ’

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಮಹಾಮಾರಿ ಕೊರೊನಾಗೆ ಏಳು ಮಂದಿ ಬಲಿಯಾಗಿರುವ ಮಾಹಿತಿ ಲಭಿಸಿದೆ. ನಿನ್ನೆ ರಾತ್ರಿ ಸುರತ್ಕಲ್ ಹೊಸಬೆಟ್ಟು ನಿವಾಸಿ ಯುವಕ ಕೊರೊನಾಗೆ ಸಾವನ್ನಪ್ಪಿದ್ದು ನಂತರ ಇತರ ಆರು ಮಂದಿ ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರು ಸಾವನ್ನಪ್ಪಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ. ಕೊರೊನಾ ವರದಿ ಬಳಿಕ ಸಂಜೆಯ ಹೆಲ್ತ್ ಬುಲೆಟಿನ್ ನಲ್ಲಿ ಸಾವಿನ ಸುದ್ದಿ ದೃಢಪಡಲಿದೆ.