ದ.ಕ: ಕೊರೊನಾಗೆ ಒಂದೇ ದಿನ ಐವರು ಸಾವು

ಮಂಗಳೂರು: ಕೊರೊನಾ ತನ್ನ ಅಟ್ಟಹಾಸ ಮುಂದುವರಿಸಿದ್ದು, ಇಂದು ದಕ್ಷಿಣ ಕನ್ನಡದಲ್ಲಿ ಒಂದೇ ದಿನ ಐವರು ಬಲಿಯಾಗುವ ಮೂಲಕ ತನ್ನ ಪ್ರತಾಪ ಮೆರೆದಿದೆ.

ಬೆಳ್ತಂಗಡಿಯ ಪಿಲಿಚಾಮುಂಡಿಕಲ್ಲು ನಿವಾಸಿ 60 ವರ್ಷದ ವೃದ್ಧ, ಪುತ್ತೂರಿನ‌ ಮೂಲಡ್ಕ ನಿವಾಸಿ 50 ವರ್ಷದ ವ್ಯಕ್ತಿ, ಮಂಗಳೂರಿನ ಉರ್ವಾಸ್ಟೋರ್ ನ 72 ವರ್ಷದ ವೃದ್ಧ, ಮಂಗಳೂರಿನ ಬಳ್ಳಾಲ್ ಭಾಗ್ ನಿವಾಸಿ 60 ವರ್ಷದ ವೃದ್ಧೆ ಹಾಗು‌ ಮಂಗಳೂರಿನ‌ ಬಂದರು ನಿವಾಸಿ 68 ವರ್ಷದ ವೃದ್ಧೆ ಬಲಿಯಾಗಿದ್ದಾರೆ.

ಈ‌ಐದು ಮಂದಿಯಲ್ಲಿ ನಾಲ್ವರು ಮಂಗಳೂರು ಕೋವಿಡ್ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದರೆ , ಪುತ್ತೂರು ಮೂಲದ ಸೋಂಕಿತ ದೇರಳಕಟ್ಟೆ ಖಾಸಗಿ ಆಸ್ಪತ್ರೆ ಯಲ್ಲಿ ಸಾವನ್ನಪ್ಪಿದ್ದಾರೆ. ಈ‌ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 46 ಕ್ಕೆ ಏರಿಕೆಯಾಗಿದೆ.

ಕೊರೊನಾ ಸೋಂಕಿತರ ಸಂಖ್ಯೆ ದಿನಂಪ್ರತಿ ಏರಿಕೆಯಾಗುತ್ತಿದ್ದು, ಜಿಲ್ಲೆಯನ್ನು ಮತ್ತೊಮ್ಮೆ ಲಾಕ್‌ಡೌನ್ ಮಾಡುವಂತೆ ಒತ್ತಾಯ ಕೇಳಿಬಂದಿದೆ‌.

Leave a Reply

Your email address will not be published. Required fields are marked *