ದೇಶದಲ್ಲೀಗ 6 ಲಕ್ಷ ಕೊರೊನಾ ಸೋಂಕಿತರು!

ಹೊಸದಿಲ್ಲಿ: ದೇಶದಲ್ಲಿ ನಿನ್ನೆಯವರೆಗೆ ಒಟ್ಟು ಕೊರೋನ ಪ್ರಕರಣಗಳ ಸಂಖ್ಯೆ ಆರು ಲಕ್ಷ ಗಡಿ ದಾಟದೆ. ಒಟ್ಟು ಸೋಂಕಿತರ ಸಂಖ್ಯೆ 6,00,032 ಆಗಿದ್ದು, ಈ ಪ್ರಮಾಣವು ಅತ್ಯಧಿಕ ಸೋಂಕಿತರನ್ನು ಹೊಂದಿರುವ ದೇಶಗಳ ಪೈಕಿ ಮೂರನೇ ಸ್ಥಾನದಲ್ಲಿರುವ ರಷ್ಯಾಗಿಂತ 50 ಸಾವಿರದಷ್ಟು ಮಾತ್ರ ಕಡಿಮೆ. ನಿನ್ನೆ ಹೊಸದಾಗಿ 18,522 ಪ್ರಕರಣಗಳು ಸೇರ್ಪಡೆಯಾಗಿದ್ದು, ಮಹಾರಾಷ್ಟ್ರ 5537, ತಮಿಳುನಾಡು 3882 ಮತ್ತು ದೆಹಲಿ 2442 ಗರಿಷ್ಠ ಪ್ರಕರಣಗಳನ್ನು ದಾಖಲಿಸಿವೆ.
ದೆಹಲಿಯಲ್ಲಿ ಜೂನ್ ಕೊನೆ ವೇಳೆಗೆ ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟುವ ನಿರೀಕ್ಷೆ ಇದೆ ಎಂದು ತಜ್ಞರು ಅಂದಾಜಿಸಿದ್ದರು. ಆದರೆ 87 ಸಾವಿರ ಪ್ರಕರಣಗಳಿಗೆ ಸೀಮಿತಗೊಳಿಸುವಲ್ಲಿ ಸರ್ಕಾರ ಯಶಸ್ವಿಯಾಗಿದೆ. ಜೂನ್ ಕೊನೆ ವೇಳೆಗೆ 60 ಸಾವಿರ ಪ್ರಕರಣಗಳನ್ನು ನಿರೀಕ್ಷಿಸಲಾಗಿತ್ತು. ಆದರೆ ಸಕ್ರಿಯ ಪ್ರಕರಣಗಳ ಸಂಖ್ಯೆ 26 ಸಾವಿರಕ್ಕೆ ಸೀಮಿತವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

Leave a Reply

Your email address will not be published. Required fields are marked *