ದೆಹಲಿ: ಭಾರೀ ಮಳೆಗೆ ನೀರಲ್ಲಿ ಮುಳುಗಿದ ಬಸ್, ವೃದ್ಧ ಮೃತ್ಯು!

ನವದೆಹಲಿ: ದೆಹಲಿಯಲ್ಲಿ ಇಂದು ಬೆಳಗ್ಗೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ತತ್ತರಿಸಿದೆ. ಮಿಂಟೋ ಸೇತುವೆ ಬಳಿ ನೀರಿನಲ್ಲಿ ಬಸ್ ಮುಳುಗಿದ್ದು, ವೃದ್ಧರ ಶವ ಪತ್ತೆಯಾಗಿದೆ.
ದೆಹಲಿಯ ಮಿಂಟೋ ಸೇತುವೆ ಬಳಿ ದೆಹಲಿ ಸಾರಿಗೆ ಸಂಸ್ಥೆ ಬಸ್(ಡಿಟಿಸಿ) ನೀರಿನಲ್ಲಿ ಮುಳುಗಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ, ಸ್ಥಳಕ್ಕೆ ಆಗಮಿಸಿ, ಬಸ್ ನಲ್ಲಿದ್ದವರನ್ನು ರಕ್ಷಿಸಿದ್ದಾರೆ.