ತನ್ನ ಏರಿಯಾದ ಎಲ್ಲರ ಮನೆಗೂ ಕೇಸರಿ ಬಣ್ಣ ಬಳಿಸಿದ ಉ.ಪ್ರ. ಸಚಿವ!

ಲಖ್ನೋ: ಸಚಿವರೊಬ್ಬರು ತನ್ನ ಏರಿಯಾದ ಎಲ್ಲರ ಮನೆಗಳಿಗೂ ಕೇಸರಿ ಬಣ್ಣ ಬಳಿಸಿರುವ ಘಟನೆ ಪ್ರಯಾಗ್ ರಾಜ್ ನಲ್ಲಿ ನಡೆದಿದ್ದು ಉದ್ಯಮಿ ಪೊಲೀಸ್ ದೂರು ದಾಖಲಿಸಿದ್ದಾರೆ. ಸಚಿವ ನಂದ್ ಗೋಪಾಲ್ ನಂದಿ ವಿರುದ್ಧ ಈ ಆರೋಪ ಕೇಳಿಬಂದಿದ್ದು ನನ್ನ ಮನೆಗೆ ಕೇಸರಿ ಬಣ್ಣ ಬಳಿಯುವುದನ್ನು ನಿಲ್ಲಿಸುವಂತೆ ಸೂಚಿಸಿದಾಗ ಗುಂಪು ನನಗೆ ಬೆದರಿಕೆ ಹಾಕಿ ನಿಂದಿಸಿದೆ ಎಂಬುದಾಗಿ ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ. ಸಚಿವರು ಕೇಸರಿ ಬಣ್ಣ ಬಳಿಯುವ ಕಾರ್ಯವನ್ನು ಸಮರ್ಥಿಸಿ ಮಾತಾಡಿದ್ದು ಅದನ್ನು `ಅಭಿವೃದ್ಧಿ ಕಾಮಗಾರಿ’ ಎಂದು ಹೇಳಿದ್ದಾರೆ.
ಉದ್ಯಮಿ ರವಿ ಗುಪ್ತಾ ಅವರು ಪ್ರಯಾಗ್ ರಾಜ್ ನ ಬಹಾದ್ದೂರ್ ಗಂಜ್ ಪ್ರದೇಶದಲ್ಲಿರುವ ತಮ್ಮ ಮನೆಯ ಬಾಲ್ಕನಿಯಿಂದ ಚಿತ್ರೀಕರಿಸಿದ ಒಂದು ನಿಮಿಷ ಅವಧಿಯ ವೀಡಿಯೋದಲ್ಲಿ ಅವರ ಮನೆಯ ಹೊರಗೋಡೆಗಳಿಗೆ ಕೇಸರಿ ಬಣ್ಣವನ್ನು ಕೆಲವರು ಸ್ಪ್ರೇ ಮಾಡುತ್ತಿರುವುದು ಕಾಣಿಸುತ್ತದೆ. ಸಚಿವರ ಸೂಚನೆ ಮೇರೆಗೆ ಕೇಸರಿ ಬಣ್ಣ ಬಳಿಯಲಾಗಿದೆ ಎಂದು ಕೆಲವರು ದೂರುತ್ತಿರುವುದೂ ವೀಡಿಯೋದಲ್ಲಿ ಕೇಳಿಸುತ್ತದೆ. ವೀಡಿಯೋ ಮಾಡಲಾಗುತ್ತಿದೆ ಎಂದು ತಿಳಿಯುತ್ತಲೇ ಯುವಕರ ಗುಂಪು ಬಾಲ್ಕನಿಯತ್ತ ಪೈಂಟ್ ಸ್ಪ್ರೇ ಮಾಡಿದ್ದು ಅದು ಫೋನ್ ಗೂ ತಾಗಿದೆ. ಗುಪ್ತಾ ದಾಖಲಿಸಿರುವ ದೂರಿನಲ್ಲಿ ಒಬ್ಬ ಆರೋಪಿಯನ್ನು ಕಮಲ್ ಕುಮಾರ್ ಕೇಸರ್ವಾನಿ ಎಂದು ಗುರುತಿಸಲಾಗಿದೆ. ಆತ ಸಚಿವರ ಸೋದರ ಸಂಬಂಧಿ ಎನ್ನಲಾಗಿದೆ.

Nandi paints his constituency saffron.

Leave a Reply

Your email address will not be published. Required fields are marked *