ಡೆಂಗ್ಯೂ ಜ್ವರಕ್ಕೆ ಬೆಳ್ತಂಗಡಿಯಲ್ಲಿ ಮೂರನೇ ಬಲಿ!

ಬೆಳ್ತಂಗಡಿ: ಡೆಂಗ್ಯೂ ಕಾಯಿಲೆ ಉಲ್ಬಣಿಸಿ ಲಿವರ್ ವೈಫಲ್ಯಕ್ಕೊಳಗಾದ ಇಳಂತಿಲ ಗ್ರಾಮದ ಮೂಡಾಜೆ ನಿವಾಸಿ, ಹಿರಿಯ ಸಾಮಾಜಿಕ ಮುಂದಾಳು ವಿಠಲ‌ ಭಟ್ (57) ಅವರು ಕೊನೆಯುಸಿರೆದಿದ್ದಾರೆ.
ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಉಪ್ಪಿನಂಗಡಿ ಮತ್ತು ಪುತ್ತೂರು ಖಾಸಗಿ ಆಸ್ಪತ್ರೆಗಳಲ್ಲಿ ಪೂರ್ವ ಚಿಕಿತ್ಸೆ ಪಡೆದಿದ್ದ ಅವರನ್ನು ನಾಲ್ಕು ದಿನಗಳ ಹಿಂದೆ ಮಂಗಳೂರು‌ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅಲ್ಲಿ ಪ್ಲೇಟ್‌ಲೆಟ್ ಪ್ರಮಾಣ 7 ಸಾವಿರ ವರೆಗೆ ಕುಸಿದಿದ್ದ ಅವರು ಚೇತರಿಸಿಕೊಂಡು 70 ಸಾವಿರ ವರೆಗೆ ಏರಿಕೆಯಾಗಿತ್ತು. ಆದರೆ ಅದಾಗಲೇ ಅವರ ಲಿವರ್ ವೈಫಲ್ಯಕ್ಕೊಳಗಾಗಿ ಅವರು ಸಾವನ್ನಪ್ಪಿದರು.
ಹವ್ಯಕ ಸಮಾಜದ ಸಂಘಟಕರಾಗಿ, ವಲಯ ಗುರಿಕಾರರಾಗಿದ್ದ ಅವರು ಅಪ್ರತಿಮ ಸಂಖಟನಾ ಚತುರತೆ ಹೊಂದಿದ್ದರು.
ಇಳಂತಿಲ ಗ್ರಾ.ಪಂ ಸದಸ್ಯರಾಗಿ, ಕಾಂಗ್ರೆಸ್‌ನ ಕಟ್ಟಾಳುವಾಗಿದ್ದ ಅವರು ಇತ್ತೀಚಿಗಿನ ಕೆಲ ವರ್ಷಗಳಿಂದ ಬದಲಾದ ರಾಜಕೀಯ ಬೆಳವಣಿಗಳಿಂದ ಬಿಜೆಪಿ ಸೇರ್ಪಡೆಗೊಂಡಿದ್ದರು.

Leave a Reply

Your email address will not be published. Required fields are marked *