ಟ್ರ್ಯಾಕ್ಟರ್ ನಲ್ಲಿ ಸಲ್ಮಾನ್ ಉಳುಮೆ: ನೆಟ್ಟಿಗರ ಬಾಯಿ ಮುಚ್ಚಿಸಿದ `ಬ್ಯಾಡ್ ಬಾಯ್’

ಮುಂಬೈ: ಕೆಲದಿನಗಳ ಹಿಂದೆ ಸಲ್ಮಾನ್ ಖಾನ್ ಮೈಮೇಲೆ ಕೆಸರು ಮೆತ್ತಿಕೊಂಡಿದ್ದ ಫೊಟೋ ಟ್ವಿಟರ್ ನಲ್ಲಿ ಹಾಕಿದ ಕೂಡಲೇ ನೆಟ್ಟಿಗರು ಟ್ರೋಲ್ ಮಾಡಿದ್ದರು. ಸಲ್ಮಾನ್ ನಾಟಕ ಮಾಡುತ್ತಿದ್ದಾರೆ ಎಂದು ಕಿಚಾಯಿಸಿದ್ದಾರೆ. ಆದರೆ ಸಲ್ಮಾನ್ ಟ್ರ್ಯಾಕ್ಟರ್ ನಲ್ಲಿ ಹೊಲದಲ್ಲಿ ಉಳುಮೆ ಮಾಡುತ್ತಿರುವ ವಿಡಿಯೋ ಇನ್ ಸ್ಟಾಗ್ರಾಮ್ ನಲ್ಲಿ ಹಾಕುವ ಮೂಲಕ ನೆಟ್ಟಿಗರ ಬಾಯಿ ಮುಚ್ಚಿಸಿದ್ದಾರೆ.
ಲಾಕ್‍ಡೌನ್ ಆರಂಭವಾದಾಗಿನಿಂದಲೂ ತಮ್ಮ ಫಾರ್ಮ್‍ಹೌಸ್‍ನಲ್ಲಿ ಸಲ್ಮಾನ್ ಖಾನ್ ಉಳಿದುಕೊಂಡಿದ್ದಾರೆ. ಅಲ್ಲಿದ್ದುಕೊಂಡೇ ಕೆಲವು ಹಾಡುಗಳನ್ನು ಶೂಟ್ ಮಾಡಿ ರಿಲೀಸ್ ಮಾಡಿದ್ದಾರೆ. ಬಿಡುವಿನ ಸಮಯದಲ್ಲಿ ತಾವು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಫಾರ್ಮ್‍ಹೌಸ್‍ನಲ್ಲಿ ಟ್ರ್ಯಾಕ್ಟರ್ ಓಡಿಸುತ್ತ, ಅಪ್ಪಟ ರೈತನಂತೆ ಕೆಲಸ ಮಾಡುತ್ತಿದ್ದಾರೆ ಸಲ್ಮಾನ್ ಖಾನ್. ಕೆಸರು ಗದ್ದೆಯಲ್ಲಿ ತಾವು ಮಾಡುತ್ತಿರುವ ಕೆಲಸದ ದೃಶ್ಯ ತುಣುಕುಗಳನ್ನು ಇನ್‍ಸ್ಟಾಗ್ರಾಮ್ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ.

Leave a Reply

Your email address will not be published. Required fields are marked *