ಟಿಕ್‌ಟಾಕ್ ನಿಷೇಧ: 45, 000 ಕೋಟಿ ರೂ ನಷ್ಟ

ಬೀಜಿಂಗ್: ಅತ್ಯಂತ ಜನಪ್ರಿಯ ವೀಡಿಯೊ ಆ್ಯಪ್ ಟಿಕ್‌ಟಾಕ್ ಸೇರಿದಂತೆ ತನ್ನ ಮೂರು ಆ್ಯಪ್‌ಗಳನ್ನು ಭಾರತ ಈ ವಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ, 6 ಬಿಲಿಯ ಡಾಲರ್ (ಸುಮಾರು 45, 000 ಕೋಟಿ ರೂಪಾಯಿ) ಸಂಭವಿಸಬಹುದು ಎಂದು ಚೀನಾದ ಬೃಹತ್ ತಂತ್ರಜ್ಞಾನ ಸಂಸ್ಥೆ ಯೂನಿಕಾರ್ನ್ ಬೈಟ್‌ಡಾನ್ಸ್ ಲಿಮಿಟೆಡ್ ಅಂದಾಜಿಸಿದೆ
ಟಿಕ್‌ಟಾಕ್ ಅಲ್ಲದೆ ಜನಪ್ರಿಯ ಯುಸಿಬ್ರೌಸರ್ ಸೇರಿದಂತೆ ಚೀನಾದೊಂದಿಗೆ ನಂಟು ಹೊಂದಿರುವ ಇತರ 58 ಆ್ಯಪ್‌ಗಳನ್ನೂ ಭಾರತ ನಿಷೇಧಿಸಿದೆ. ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆಗೆ, ಭಾರತದ ರಕ್ಷಣೆಗೆ ಹಾಗೂ ದೇಶದ ಭದ್ರತೆಗೆ ಮತ್ತು ಸಾರ್ವಜನಿಕ ವ್ಯವಸ್ಥೆಗೆ ಭಂಗ ತರುವ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವುದಕ್ಕಾಗಿ ಈ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂದು ಸರಕಾರದ ಆದೇಶ ಹೇಳುತ್ತದೆ.
ಈ 6 ಬಿಲಿಯ ಡಾಲರ್ ಮೊತ್ತವು ಭಾರತ ನಿಷೇಧಿಸಿದ ಇತರ ಎಲ್ಲ ಚೀನೀ ಆ್ಯಪ್‌ಗಳಿಂದಾಗುವ ಒಟ್ಟು ನಷ್ಟಕ್ಕಿಂತಲೂ ಹೆಚ್ಚಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ
ಚೀನಾ ಸರಕಾರದೊಂದಿಗೆ ನಂಟು ಹೊಂದಿರುವ ಭೀತಿಯಲ್ಲಿ ಹಾಗೂ ಬಳಕೆದಾರರ ಮಾಹಿತಿಗಳ ರಕ್ಷಣೆಯ ವಿಷಯದಲ್ಲಿ ವಿದೇಶಿ ಸರಕಾರಗಳ ಅವಕೃಪೆಗೆ ಒಳಗಾದ ಚೀನಾದ ಇತ್ತೀಚಿನ ತಂತ್ರಜ್ಞಾನ ಕಂಪೆನಿ ಬೈಟ್‌ಡಾನ್ಸ್ ಆಗಿದೆ.

Leave a Reply

Your email address will not be published. Required fields are marked *