ಜು.31ರವರೆಗೆ ಪಿಲಿಕುಲ ನಿಸರ್ಗಧಾಮ ಬಂದ್!

ಮಂಗಳೂರು: ಕೊರೊನಾ ಸೋಂಕು ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಪಿಲಿಕುಲ ನಿಸರ್ಗಧಾಮದೊಳಗೆ ಜು.4ರಿಂದ ಜು.31ರವರೆಗೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೊರೊನಾ ಸೋಂಕು ಹಾಗೂ ಮಳೆಯ ಕಾರಣದಿಂದ ಪಿಲಿಕುಳ ನಿಸರ್ಗಧಾಮಕ್ಕೆ ಸಂದರ್ಶಕರ ಭೇಟಿಯು ಅತ್ಯಲ್ಪವಾಗಿದೆ. ಆದ್ದರಿಂದ ಜು.31ರವರೆಗೆ ಸಂದರ್ಶಕರ ಭೇಟಿಗೆ ಅವಕಾಶವಿರುವುದಿಲ್ಲ ಎಂದು ಪಿಲಿಕುಳ ಕಾರ್ಯನಿರ್ವಾಹಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.