ಜೀವಂತವಾಗಿ ಮನೆಗೆ ತೆರಳಬೇಕೆಂದರೆ ಇಸ್ಲಾಂ ಸ್ವೀಕಾರ ಮಾಡಿ ಎಂದು ಬೆದರಿಸಿ 102 ಹಿಂದೂಗಳ ಮತಾಂತರ

ಇಸ್ಲಮಾಬಾದ್: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಬಾದಿನ ಜಿಲ್ಲೆಯಲ್ಲಿ 102 ಹಿಂದೂಗಳನ್ನು ಮತಾಂತರಿಸಿ ಅವರನ್ನು ಮುಸಲ್ಮಾನರನ್ನಾಗಿಸಿದ್ದಾರೆ ಎಂದು `ಟೈಮ್ಸ್ ನೌ’ ಈ ಆಂಗ್ಲ ವಾರ್ತಾವಾಹಿನಿ ವರದಿ ಮಾಡಿದೆ.
ಇದರಲ್ಲಿ ಮಕ್ಕಳು, ಮಹಿಳೆಯರು ಹಾಗೂ ಪುರುಷರು ಸೇರಿದ್ದಾರೆ. ಅದೇ ರೀತಿ ಇಲ್ಲಿನ ದೇವಸ್ಥಾನದ ಮೂರ್ತಿಯನ್ನು ಒಡೆದು ದೇವಸ್ಥಾನವನ್ನು ಮಸೀದಿಯನ್ನಾಗಿ ಬದಲಾಯಿಸಲಾಗಿದೆ.
ತಬ್ಲಿಘಿ ಜಮಾಅತ್ನ ಸದಸ್ಯರಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಬಾದಿನ ಜಿಲ್ಲೆಯ ಗೊಲಾರಿಚಿಯಲ್ಲಿನ ಹಿಂದೂಗಳು, ಅವರ ಮೇಲೆ ತಬ್ಲಿಘಿ ಜಮಾಅತ್ನ ಸದಸ್ಯರಿಂದ ದೌರ್ಜನ್ಯ ನಡೆದಿದೆ. ಅವರ ಮನೆಗಳನ್ನು ಧ್ವಂಸ ಮಾಡಲಾಗಿದ್ದು, ಓರ್ವ ಹಿಂದೂ ಬಾಲಕನು ಇಸ್ಲಾಮನನ್ನು ಸ್ವೀಕಾರ ಮಾಡಲು ನಿರಾಕರಿಸಿದಾಗ ಆತನನ್ನು ಅಪಹರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.