ಜಿಲ್ಲೆಯಲ್ಲಿ ಕೊರೋನಾದಲ್ಲಿ ಸತ್ತಿದ್ದು ಬರೀ 4 ಮಂದಿ! ಡಿಸಿ ಹೇಳಿಕೆ ಬಗ್ಗೆ ವ್ಯಾಪಕ ಚರ್ಚೆ

ಮಂಗಳೂರು: ನಿನ್ನೆ ಜಿಲ್ಲೆಯಲ್ಲಿನ ಕೊರೋನಾ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದ ಜಿಲ್ಲಾಧಿಕಾರಿಗಳು ದ.ಕ. ಜಿಲ್ಲೆಯಲ್ಲಿ ಜು.10ರ ಶುಕ್ರವಾರದವರೆಗೆ 36 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಈ ಪೈಕಿ ಮೂರು ಮಂದಿ ಭಟ್ಕಳ ಮೂಲದವರಾಗಿದ್ದರೆ, ಇನ್ನುಳಿದ ಒಬ್ಬರು ಚಿತ್ರದುರ್ಗ ಹಾಗೂ ಒಬ್ಬರು ಮಡಿಕೇರಿಯ ಮೂಲದವರಾಗಿದ್ದಾರೆ. 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಜನರು ಒಂಬತ್ತು ಮಂದಿ ಮೃತರಾಗಿದ್ದರೆ. 50 ಕ್ಕಿಂತ 60 ವರ್ಷದೊಳಗೆ ಹತ್ತು ಮಂದಿ ಸಾವನ್ನಪ್ಪಿದ್ದಾರೆ. 60 ಕ್ಕಿಂತ 70 ವರ್ಷದೊಳಗೆ 11 ಮಂದಿ ಮೃತಪಟ್ಟಿದ್ದಾರೆ. 70ಕ್ಕಿಂತ ವರ್ಷಕ್ಕಿಂತ ಮೇಲ್ಪಟ್ಟ ಒಬ್ಬರು ಸಾವನ್ನಪ್ಪಿದ್ದಾರೆ. ಸಾವಿಗೀಡಾದ 36 ಜನರ ಪೈಕಿ 26 ಜನರ ಇತರ ಖಾಯಿಲೆಗಳಿಂದ ಬಳಲಿ ಸಾವನ್ನಪ್ಪಿದ್ದಾರೆ. 4 ಜನರು ಬೇರೆ ಕಾರಣಗಳಿಂದ ಮೃತಪಟ್ಟಿದ್ದಾರೆ. 4 ಜನರು ಮಾತ್ರ ಕೋವಿಡ್ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು.
ಜಿಲ್ಲಾಧಿಕಾರಿಗಳ ಈ ಹೇಳಿಕೆ ಜನಸಾಮಾನ್ಯರಲ್ಲಿ ಮತ್ತಷ್ಟು ಗೊಂದಲ ಸೃಷ್ಟಿಸಿದ್ದು ಹಾಗಿದ್ದರೆ ಕೊರೋನಾ ಪ್ರಕರಣಗಳ ಸಾವು ಎಂದು ಜಿಲ್ಲಾಡಳಿತ ಯಾಕೆ ಈ ಹಿಂದೆ ಹೇಳಿತ್ತು ಎಂದು ಚರ್ಚೆ ನಡೆಸುತ್ತಿದ್ದಾರೆ.
Statistics Wenlock DMO Sadashiva helliddu. 4 jana co-individual covid deaths andre covid-19 iruvadu avaru teerikondu hooda mele postive bandiddu. Innu 4 non-covid pneumonia anta heelidru. Avaru heeliddara vyatariktavagi ee melina varadi ide