ಜನರನ್ನು ಮೂರ್ಖರನ್ನಾಗಿಸಿದ `ಬಿಗ್ ಬಾಸ್’ ನಟಿ!

ಮಂಗಳೂರು:ಬಿಗ್ ಬಾಸ್’ ಖ್ಯಾತಿಯ ನಟಿ ಜಯಶ್ರೀ ರಾಮಯ್ಯ ಆತ್ಮಹತ್ಯೆಗೆ ಯತ್ನಿಸಿದ್ದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಇದಾದ ಕೆಲವೇ ನಿಮಿಷಗಳಲ್ಲಿ ಆಕೆ `ನಾನು ಕ್ಷೇಮವಾಗಿದ್ದೇನೆ, ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದಗಳು’ ಎನ್ನುವ ಮೂಲಕ ಜನರನ್ನು ಯಾಮಾರಿಸಿದ್ದಾರೆ. ಜಯಶ್ರೀ ರಾಮಯ್ಯ ಬಿಗ್ ಬಾಸ್ ಹೋಗಿ ಬಂದ ಬಳಿಕ ವಿವಾದಗಳಲ್ಲೇ ದಿನ ಕಳೆಯುತ್ತಿದ್ದು ಇದೀಗ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಇಂದು ಬೆಳಗ್ಗೆ ಫೇಸ್ ಬುಕ್ ನಲ್ಲಿ ಮೆಸೇಜ್ ಪೋಸ್ಟ್ ಮಾಡಿದ್ದ ಜಯಶ್ರೀ ರಾಮಯ್ಯ ಅವರು, ನನಗೆ ಜೀವನ ಸಾಕು, ಎಲ್ಲರಿಗೂ ಗುಡ್ ಬೈ ಎಂದಿದ್ದರು. ಇದಾದ ಬಳಿಕ ಕೆಲಹೊತ್ತಿನಲ್ಲೇ ಮತ್ತೊಂದು ಪೋಸ್ಟ್ ಹಾಕಿರುವುದು ಅಚ್ಚರಿಗೆ ಕಾರಣವಾಗಿದೆ.

Leave a Reply

Your email address will not be published. Required fields are marked *