ಚೆಂಡಿಗೆ ಎಂಜಲು ಸವರಿದ ಸಿಬ್ಲಿ!

ಮ್ಯಾಂಚೆಸ್ಟರ್‌: ಇಲ್ಲಿ ನಡೆಯುತ್ತಿದ್ದ ವೆಸ್ಟ್‌ ಇಂಡೀಸ್‌ ವಿರುದ್ಧದ ದ್ವಿತೀಯ ಟೆಸ್ಟ್‌ ಪಂದ್ಯದ ಪಂದ್ಯದ ವೇಳೆ ಇಂಗ್ಲೆಂಡ್ ಕ್ರಿಕೆಟಿಗ ಡೊಮಿನಿಕ್ ಸಿಬ್ಲಿ ಚೆಂಡಿಗೆ ಸಲೈವಾ (ಎಂಜಲು) ಉಜ್ಜಿದ್ದಾರೆ. ಈ ಮೂಲಕ ಐಸಿಸಿ ಜಾರಿ ಮಾಡಿದ್ದ ಹೊಸ ನಿಯಮವನ್ನು ಉಲ್ಲಂಘಿಸಿದ ಮೊದಲ ಆಟಗಾರ ಎಂಬ ಕುಖ್ಯಾತಿಗೆ ಪಾತ್ರವಾಗಿದ್ದಾರೆ.
ಕ್ರಿಕೆಟ್‍ನಲ್ಲಿ ಬೌಲರ್ ಕೈಗೆ ಚೆಂಡು ನೀಡುವ ಮುನ್ನ ಆಟಗಾರ ಚೆಂಡಿಗೆ ಎಂಜುಲು ಉಜ್ಜಿ ಚೆಂಡಿನ ಶೈನ್ ಕಾಪಾಡಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿತ್ತು. ಆದರೆ ಕೊರೊನಾ ಕಾರಣದಿಂದ ಇತ್ತೀಚೆಗೆ ಐಸಿಸಿ ಇದಕ್ಕೆ ನಿರ್ಬಂಧ ಹೇರಿದ್ದು, ಆಟಗಾರ 2 ಬಾರಿ ಈ ನಿಯಮವನ್ನು ಉಲ್ಲಂಘಿಸಿದರೆ ತಂಡಕ್ಕೆ 5 ರನ್ ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿತ್ತು. ಇಂಗ್ಲೆಂಡ್-ವೆಸ್ಟ್ ಇಂಡೀಸ್ ನಡುವೆ ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಫೀಲ್ಡರ್ ಡೊಮಿನಿಕ್ ಸಿಬ್ಲಿ ಹಲವು ದಿನಗಳ ಅಭ್ಯಾಸದಂತೆ ಚೆಂಡು ಕೈಗೆ ಬರುತ್ತಿದಂತೆ ಎಂಜಲು ಉಜ್ಜಿ ನಿಯಮ ಉಲ್ಲಂಘಿಸಿದ್ದಾರೆ. ವೆಸ್ಟ್ ಇಂಡೀಸ್ ಮೊದಲ ಇನ್ನಿಂಗ್ಸ್‌ನ 42ನೇ ಓವರಿನಲ್ಲಿ ಘಟನೆ ನಡೆದಿದ್ದು, ಆಫ್ ಸ್ಪಿನ್ನರ್ ಡೊಮ್ ಬೆಸ್ ಬೌಲಿಂಗ್ ಮಾಡಲು ಮುಂದಾಗಿದ್ದರು. ಈ ವೇಳೆ ಡೊಮಿನಿಕ್ ಸಿಬ್ಲಿ ಚೆಂಡಿಗೆ ಎಂಜಲು ಸವರಿಸಿದ್ದರು. ಕೂಡಲೇ ತಮ್ಮ ತಪ್ಪನ್ನು ಅರಿತ ಸಿಬ್ಲೆ ಫೀಲ್ಡ್ ಅಂಪೈರ್ ಗೆ ಮಾಹಿತಿ ನೀಡಿದ್ದರು. ತಕ್ಷಣ ಅಂಪೈರ್ ಚೆಂಡನ್ನು ಸ್ಯಾನಿಟೈಸ್ ಮಾಡಿ ಪಂದ್ಯವನ್ನು ಪುನರ್ ಆರಂಭಿಸಿದ್ದರು.

Leave a Reply

Your email address will not be published. Required fields are marked *