ಚಿಕ್ಕಮಗಳೂರು: ತಂತಿಬೇಲಿಗೆ ಒಂಟಿ ಸಲಗ ಬಲಿ!

ಕಡೂರು: ವಿದ್ಯುತ್ ತಂತಿ ತಗುಲಿದ್ದರಿಂದಾಗಿ ಕಾಫಿನಾಡಲ್ಲಿ ಮತ್ತೊಂದು ಆನೆ ಬಲಿಯಾಗಿದೆ. ಜೋಳದ ಬೆಳೆಗೆ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಬೃಹತ್ ಗಾತ್ರದ ಒಂಟಿ ಸಲಗ ಕೊನೆಯುಸಿರೆಳೆದಿದೆ.
ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು ಹುಲಿಯಪ್ಪ ಎಂಬಾತ ತನ್ನ ಜಮೀನಿನಲ್ಲಿ ವಿದ್ಯುತ್ ಬೇಲಿ ಅಳವಡಿಸಿದ್ದ ಎನ್ನಲಾಗಿದೆ. ವಿದ್ಯುತ್ ತಗಲುತ್ತಿದ್ದಂತೆ ಜೋರಾಗಿ ಗೀಳಿಟ್ಟ ಒಂಟಿ ಸಲಗ ನರಳಿ ಪ್ರಾಣ ಬಿಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಹುಲಿಯಪ್ಪನ ಕುಟುಂಬ ನಾಪತ್ತೆಯಾಗಿದ್ದು ಸ್ಥಳಕ್ಕೆ ಕಡೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *