ಚನ್ನರಾಯಪಟ್ಟಣ ಎಸ್ ಐ ನೇಣಿಗೆ ಶರಣು! ಕೊಲೆ ಆರೋಪಿಗಳ ಬಂಧನ ಬೆನ್ನಲ್ಲೇ ಕೃತ್ಯ!!

ಚನ್ನರಾಯಪಟ್ಟಣ: ನಗರದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರ ಆರೋಪಿಗಳನ್ನು ತೀವ್ರ ರಾಜಕೀಯ ಒತ್ತಡದ ಮಧ್ಯೆಯೂ ಬಂಧಿಸಿದ ಬೆನ್ನಲ್ಲೇ ಪಿಎಸ್ಐ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಪಿಎಸ್ ಐ ಕಿರಣ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡವರು.
ಚನ್ನರಾಯಪಟ್ಟಣದ ನಗರ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಿರಣ್ ಕುಮಾರ್ ಚನ್ನರಾಯಪಟ್ಟಣದ ತಮ್ಮ ಮನೆಯಲ್ಲಿ ಸಮವಸ್ತ್ರದಲ್ಲೇ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಮೃತದೇಹ ಚನ್ನರಾಯಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.
ಚನ್ನರಾಯಪಟ್ಟಣದಲ್ಲಿ ಕಳೆದೆರಡು ದಿನಗಳಲ್ಲಿ ಎರಡು ಕೊಲೆಗಳಾಗಿತ್ತು. ಕೊಲೆ ಆರೋಪಿಗಳನ್ನು ಬಂಧಿಸಿದ್ದ ಕಿರಣ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದರು. ನಿನ್ನೆ ರಾತ್ರಿ ಬಂಧಿತ ಆರೋಪಿಗಳಿಂದ ಮಹಜರು ನಡೆಸಿದ ಬಳಿಕ ರೂಮಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಎಎಸ್‌ಪಿ ನಂದಿನಿ, ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ.
ಇಂದು ಚನ್ನರಾಯಪಟ್ಟಣಕ್ಕೆ ಐಜಿ-ಎಸ್ಪಿ ಭೇಟಿ ನೀಡಲಿದ್ದರು. ಆದರೆ ಅದಕ್ಕೂ ಮುನ್ನ ಕಿರಣ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

1 thought on “ಚನ್ನರಾಯಪಟ್ಟಣ ಎಸ್ ಐ ನೇಣಿಗೆ ಶರಣು! ಕೊಲೆ ಆರೋಪಿಗಳ ಬಂಧನ ಬೆನ್ನಲ್ಲೇ ಕೃತ್ಯ!!

  1. ಅರೋಪಿಗಳ ಬಂಧನ ಎಂದು ಯಾಕೆ ಬರೆದಿದ್ದೀರಿ,,
    ಬಂಧಿತರ ಬಗ್ಗೆ ವಿಷಯ ವಿವರಣೆ ಎಲ್ಲಿ ಸ್ವಾಮಿ?

Leave a Reply

Your email address will not be published. Required fields are marked *