ಗ್ಯಾಂಗ್ ಸ್ಟರ್ ವಿಕಾಸ್ ದುಬೆ ಎನ್ ಕೌಂಟರ್ ನಲ್ಲಿ ಹತ್ಯೆ!

ಲಖ್ನೋ: ಎಂಟು ಮಂದಿ ಪೊಲೀಸರ ಹತ್ಯೆಗೈದು ತಲೆಮರೆಸಿಕೊಂಡಿದ್ದ ಉತ್ತರ ಪ್ರದೇಶದ ಮೋಸ್ಟ್ ವಾಂಟೆಡ್ ಗ್ಯಾಂಗ್ ಸ್ಟರ್ ವಿಕಾಸ್ ದುಬೆ ನಿನ್ನೆ ಮುಂಜಾನೆ ಪೊಲೀಸರ ಮುಂದೆ ಶರಣಾಗಿದ್ದು ಇಂದು ಮುಂಜಾನೆ ಆತನನ್ನು ಗುಂಡಿಟ್ಟು ಕೊಂದಿದ್ದಾರೆ ಎನ್ನಲಾಗುತ್ತಿದೆ.
ವಿಕಾಸ್ ನನ್ನು ಕರೆದೊಯ್ಯುವಾಗ ವಾಹನ ಪಲ್ಟಿಯಾಗಿ ಆತ ಗಂಭೀರ ಗಾಯಗೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದರು. ಆದರೆ ಸ್ಥಳೀಯರು ಮಾಧ್ಯಮಗಳ ಮುಂದೆ ಮಾಹಿತಿ ನೀಡಿದ್ದು ಸ್ಥಳದಲ್ಲಿ ಅಪಘಾತ ನಡೆದಿಲ್ಲ, ಫೈರಿಂಗ್ ಸದ್ದು ಕೇಳಿತ್ತು. ನಾವು ಸ್ಥಳಕ್ಕೆ ಧಾವಿಸುವಾಗ ಪೊಲೀಸರು ನಮ್ಮನ್ನು ಸ್ಥಳದಿಂದ ಹೊರಗಡೆ ಹೋಗುವಂತೆ ಹೇಳಿದರು ಎಂದು ತಿಳಿಸಿದ್ದಾರೆ.