ಗೌರವಯುತವಾಗಿ ಕೊರೊನಾ ಸೋಂಕಿತನ ಶವಸಂಸ್ಕಾರ ಮಾಡಿ ಮಾದರಿಯಾದ ಪಿಎಫ್ ಐ ಕಾರ್ಯಕರ್ತರು!

ಮಂಗಳೂರು: ರಾಜ್ಯದ ನಾನಾ ಭಾಗಗಳಲ್ಲಿ ಕೊರೊನಾ ಸೋಂಕಿತರು ಸತ್ತಾಗ ಗುಂಡಿ ತೆಗೆದು ಎಸೆಯುತ್ತಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವಂತೆಯೇ ನಗರದ ಬೈಕಂಪಾಡಿಯ ಅಂಗರಗುಂಡಿ ಎಂಬಲ್ಲಿ ಕೊರೊನಾ ಸೋಂಕಿತ ಸತ್ತಾಗ ಆತನ ಶವವನ್ನು ಗೌರವಯುತವಾಗಿ ಹೂಳುವ ಮೂಲಕ ಪಿಎಫ್ ಐ ಕಾರ್ಯಕರ್ತರು ಮಾದರಿಯಾಗಿದ್ದಾರೆ. ಪಿಎಫ್ ಐ ಸಂಘಟನೆಯ ಮುಖಂಡರು, ಕಾರ್ಯಕರ್ತರು ಸೇರಿದಂತೆ 30ಕ್ಕೂ ಹೆಚ್ಚು ಮಂದಿ ಶವವನ್ನು ಹೂಳುವುದಕ್ಕೆ ಅಗತ್ಯ ಸುರಕ್ಷತಾ ಕ್ರಮ ಬಳಕೆಯ ಬಗ್ಗೆ ತರಬೇತಿ ಪಡೆದಿದ್ದು ಈ ಮೂಲಕ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.
ಕೆಲವು ದಿನಗಳಿಂದ ಬಳ್ಳಾರಿ, ಯಾದಗಿರಿಯಲ್ಲಿ ಕೊರೊನಾ ಸೋಂಕಿತರು ಮೃತಪಟ್ಟ ಸಂದರ್ಭ ಅವರ ಶವವನ್ನು ಗೌರವಯುತವಾಗಿ ಶವಸಂಸ್ಕಾರ ಮಾಡದೆ ಗುಂಡಿ ತೆಗೆದು ಎಸೆಯುತ್ತಿದ್ದ ಅಮಾನವೀಯ ಕೃತ್ಯ ಬೆಳಕಿಗೆ ಬಂದಿತ್ತು. ಇದು ರಾಜ್ಯದೆಲ್ಲೆಡೆ ಆಕ್ರೋಶವನ್ನು ಹುಟ್ಟುಹಾಕಿದ್ದು ರಾಜ್ಯ ಸರಕಾರದ ಮಾನ ಹರಾಜಾಗಿತ್ತು. ಆದರೆ ನಗರದಲ್ಲಿ ನಿನ್ನೆ ಮೃತಪಟ್ಟ ಭಟ್ಕಳ ಮೂಲದ 57 ವರ್ಷ ಪ್ರಾಯದ ವ್ಯಕ್ತಿಯ ಶವವನ್ನು ಪಿಎಫ್ ಐ ಕಾರ್ಯಕರ್ತರೇ ಅಂಗರಗುಂಡಿ ಮಸೀದಿಯ ದಫನಸ್ಥಳಕ್ಕೆ ಕೊಂಡೊಯ್ದು ಇಸ್ಲಾಂ ಧರ್ಮದ ವಿಧಿವಿಧಾನಗಳ ಮೂಲಕ ಶವಸಂಸ್ಕಾರ ನಡೆಸಿದ್ದಾರೆ.

Leave a Reply

Your email address will not be published. Required fields are marked *