ಗುರುಪುರ: ಗುಡ್ಡ ಕುಸಿದು ಮಣ್ಣಿನೊಳಗಡೆ ಸಿಲುಕಿದ ಇಬ್ಬರು ಮಕ್ಕಳು: ಹಲವು ಮನೆಗಳು ಅಪಾಯದಲ್ಲಿ

ಗುರುಪುರ: ಗುಡ್ಡ ಕುಸಿದು ಮಣ್ಣಿನೊಳಗಡೆ ಸಿಲುಕಿದ ಇಬ್ಬರು ಮಕ್ಕಳು: ಹಲವು ಮನೆಗಳು ಅಪಾಯದಲ್ಲಿ

ಮಂಗಳೂರು: ಧಾರಾಕಾರ ಮಳೆಯಿಂದಾಗಿ ಗುಡ್ಡ ಕುಸಿದು ಇಬ್ಬರು ಮಕ್ಕಳು ಮಣ್ಣಿನಡಿ ಸಿಲುಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಗುರುಪುರ ಬಂಗ್ಲಗುಡ್ಡೆ ಎಂಬಲ್ಲಿ ನಡೆದಿದೆ.

ಗುಡ್ಡ ಕುಸಿದಿದ್ದು ಹಲವು ಮನೆಗಳ ಮೇಲೆ ಬೀಳುತ್ತಿದೆ. ಒಂದು ಮನೆಗೆ ಗುಡ್ಡದ ಮಣ್ಣು ಬಿದ್ದಿರುವ ಪರಿಣಾಮ ಇಬ್ಬರು ಮಕ್ಕಳು ಅದರೊಳಗಡೆ ಸಿಲುಕಿದ್ದಾರೆ. ಅವರನ್ನು ರಕ್ಷಿಸುವ ಕೆಲಸ ಭರದಿಂದ ಸಾಗುತ್ತಿದೆ.

ಗುಡ್ಡ ಕುಸಿದಿರುವುದರಿಂದ ಹಲವು ಮನೆಗಳು, ಕುಟುಂಬ ಅಪಾಯದಲ್ಲಿದೆ. ಈಗಾಗಲೇ ನಾಲ್ಕು ಮನೆಗಳ ಮೇಲೆ ಗುಡ್ಡ ಕುಸಿದು ಬಿದ್ದಿದೆ. ಇಲ್ಲಿನ ಎಂಟು ಮನೆಗಳು ಅಪಾಯದಲ್ಲಿದೆ. ನಿರಂತರವಾಗಿ ಗುಡ್ಡ ಕುಸಿಯುತ್ತಿದ್ದು ಸ್ಥಳೀಯರು ಮಣ್ಣು ತೆರವು ಗೊಳಿಸುತ್ತಿದ್ದಾರೆ.

ಈ ರಸ್ತೆ ಕೈಕಂಬ ಪೊಳಲಿ ದ್ವಾರದ ಸಮೀಪದ ರಸ್ತೆಯಾಗಿ ಗುರುಪುರ ಸೇತುವೆ ಸಮೀಪದ ರಸ್ತೆಗೆ ಸಂಪರ್ಕ‌ ಕಲ್ಪಿಸುತ್ತದೆ. ಈ ರಸ್ತೆಯನ್ನು ಇತ್ತೀಚೆಗೆ ದುರಸ್ತಿಗೊಳಿಸಿದ್ದು, ಆದರೆ ಮಳೆಯಿಂದಾಗಿ ರಸ್ತೆ ಕೆಟ್ಟು ಹೋಗಿತ್ತು. ನೀರು ಸರಾಗವಾಗಿ ಹರಿಯಲು ಸಾಧ್ಯವಾಗದ ಕಾರಣ ಕುಸಿತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದುಬಂದಿದೆ.

Leave a Reply

Your email address will not be published. Required fields are marked *