ಗುಬ್ಬಿ: ಕೋವಿಡ್ ಕೇರ್ ಸೆಂಟರ್ ಗೆ ಡಿಸಿ ಭೇಟಿ, ಪರಿಶೀಲನೆ

ಗುಬ್ಬಿ: ತಾಲೂಕಿನ ಕಸಬಾ ಹೋಬಳಿ ಕಳ್ಳಿಪಾಳ್ಯ ಗ್ರಾಮದ ಓಂ ಪ್ಯಾಲೇಸ್ ನಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಇಂದು ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಶೀಲಿಸಿದರು. 67 ಬೆಡ್ ಗಳುಳ್ಳ ಐಸೋಲೇಷನ್ ಕೇರ್ ಸೆಂಟರ್ ಅನ್ನು ತಾಲೂಕು ಆಡಳಿತ ವತಿಯಿಂದ ತೆರೆಯಲಾಗಿದ್ದು ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಪ್ರೈಮರಿ ಕಾಂಟ್ಯಾಕ್ಟ್ ಹೊಂದಿದ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲು ತಾಲೂಕು ಆಡಳಿತ ಜಿಲ್ಲಾಡಳಿತದ ಆದೇಶದ ಮೇರೆಗೆ ಕೋವಿಡ್ ಕೇರ್ ತೆರೆಯಲು ಸಜ್ಜಾಗಿದೆ.
ಪ್ರಾಥಮಿಕ ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗುವುದು, ಜೊತೆಗೆ ಅವರು ಉಳಿಯಲು ಪ್ರತ್ಯೇಕ ಶೆಡ್ ಹಾಕಲಾಗಿದೆ. ಪ್ರತಿ ನಿತ್ಯ ಎರಡು ಅವಧಿ ಊಟ, ಒಂದು ಅವಧಿ ತಿಂಡಿ, ಕಾಫಿ ಟೀ ವ್ಯವಸ್ಥೆ ಮಾಡುವಂತೆಯೂ ಜಿಲ್ಲಾಧಿಕಾರಿ. ಪ್ರತಿಯೊಬ್ಬರಿಗೂ ಪ್ರತ್ಯೇಕವಾಗಿ ಊಟದ ವ್ಯವಸ್ಥೆ ಮಾಡಲು ಸಲಹೆ ನೀಡಿದ್ದಾರೆ. ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳು ಕೇರ್ ಸೆಂಟರ್ ಒಳಗೆ ಊಟಕ್ಕೂ ಮುನ್ನ ಹಾಗೂ ನಂತರ ಸ್ಯಾನಿಟೈಸರ್ ಬಳಸಲು ವ್ಯವಸ್ಥೆ ಮಾಡಲು ತಿಳಿಸಿದ್ದಾರೆ. ಚಿಕಿತ್ಸೆ ವೇಳೆ ಫಲಕಾರಿಯಾಗದೆ ಒಂದು ವೇಳೆ ಮೃತರಾದರೆ ಮೃತದೇಹ ತೆಗೆದುಕೊಂಡು ಹೋಗಲು ಒಂದು ತಂಡ ರಚನೆ ಮಾಡಿ ಜಿಲ್ಲಾಡಳಿತ ಸೂಚಿಸಿದ ಸೂಕ್ತ ಸ್ಥಳದಲ್ಲೇ ಸಂಸ್ಕಾರ ಮಾಡಲು ಸೂಚಿಸುವುದಾಗಿ ಜಿಲ್ಲಾಧಿಕಾರಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ. ತಹಶೀಲ್ದಾರ್ ಡಾ. ಪ್ರದೀಪ್ ಕುಮಾರ್, ಕಸಬಾ ಕಂದಾಯ ನಿರೀಕ್ಷಕ ರಮೇಶ್ ಕುಮಾರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *