ಗುಬ್ಬಿ: ಎರಡು ಕೊರೊನಾ ಪಾಸಿಟಿವ್ ಪತ್ತೆ

ಗುಬ್ಬಿ: ತಾಲೂಕಿನ ಹಾಗಲವಾಡಿ ಹೋಬಳಿಯಲ್ಲಿ ಒಂದೇ ದಿನ ಎರಡು ಪಾಸಿಟಿವ್ ಪ್ರಕರಣ ದಾಖಲಾಗಿ ಒಟ್ಟು ತಾಲೂಕಿನಲ್ಲಿ 07 ಕೊರೊನ ಪಾಸಿಟಿವ್ ಪ್ರಕರಣ ಈವರೆಗೆ ದಾಖಲಾದಂತೆ ಆಗಿದೆ. ಹಾಗಲವಾಡಿ ಹೋಬಳಿಯ ಗಂಗಯ್ಯನಪಾಳ್ಯ ಗ್ರಾಮದ 60 ವರ್ಷದ ಮಹಿಳೆಗೆ ಕೊರೊನಾ ಸೋಂಕು ಧೃಡಪಟ್ಟಿದೆ. ಈಕೆ ಕ್ಯಾನ್ಸರ್ ರೋಗಿಯಾಗಿದ್ದು ತುಮಕೂರಿನ ಸಿದ್ಧಗಂಗಾ ಹೃದಯ ಆಸ್ಪತ್ರೆಯಲ್ಲಿ ಗಂಟಲ ದ್ರವವನ್ನು ಮಂಗಳವಾರ ತೆಗೆದುಕೊಂಡು ಕಳುಹಿಸಿದ್ದು ಅಲ್ಲಿ ಕೊರೊನಾ ಸೋಂಕು ದೃಢವಾಗಿದೆ.
12 ಮಂದಿ ಪ್ರೈಮರಿ ಕಾಂಟ್ಯಾಕ್ಟ್ ಇದ್ದು ಅವರನ್ನು ಹಾಗಲವಾಡಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಇರಿಸಿದ್ದು 32 ಮಂದಿ ಸೆಕೆಂಡರಿ ಕಾಂಟ್ಯಾಕ್ಟ್ ಇದ್ದು ಅವರನ್ನು ಹೋಂ ಕ್ವಾರಂಟೈನ್ ಮಾಡಲಾಗಿದೆ. ಮತ್ತೊಂದು ಹಾಗಲವಾಡಿ ಹೋಬಳಿ ಅಂತಾಪುರ ಗ್ರಾಮದ 25 ವರ್ಷ ಯುವಕನಿಗೆ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ಹೊಸಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವುದರಿಂದ ಹೊಸಕೆರೆ ಎಂದು ಬರೆಯಲಾಗಿದೆ. ಮತ್ತೊಂದು ಪಾಸಿಟಿವ್ ಪ್ರಕರಣ ದಾಖಲಿಸಿಕೊಂಡಿದ್ದಾರೆ ಹೂವಿನಕಟ್ಟೆ ಮುರಾರ್ಜಿ ಶಾಲೆಯಲ್ಲಿ ಕೊರಂಟೈನ್ ನಲ್ಲಿ 15 ದಿನದಿಂದ ಇದ್ದು ನಿನ್ನೆ ಪಾಸಿಟಿವ್ ಬಂದಿದೆ. ಹಾಗಲವಾಡಿ ಕಂದಾಯ ನಿರೀಕ್ಷಕ ಮಂಜುನಾಥ್ ಸ್ಥಳದಲ್ಲೇ ಇದ್ದು ಮುಂಜಾಗೃತಾ ಕ್ರಮದ ವ್ಯವಸ್ಥೆ ಮಾಡಿದ್ದಾರೆ.

Leave a Reply

Your email address will not be published. Required fields are marked *