ಗುಟ್ಕಾ ತಿಂದು ಉಗುಳಿದಾತನಿಗೆ ಅಂಗಿ ಬಿಚ್ಚಿ ಒರೆಸುವ ಶಿಕ್ಷೆ!

ಚಿಕ್ಕೋಡಿ: ಗುಟ್ಕಾ ತಿಂದು ರಸ್ತೆಗೆ ಉಗುಳಿದ ವ್ಯಕ್ತಿಗೆ ಕೊರೊನಾ ವಾರಿಯರ್ ಶಿಕ್ಷೆ ನೀಡಿದ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ಗುಟ್ಕಾ ತಿಂದು ನಿಪ್ಪಾಣಿ ನಗರಸಭೆ ಎದುರು ರಸ್ತೆಗೆ ಉಗುಳಿದ್ದಾನೆ. ಇದನ್ನು ಕೊರೊನಾ ವಾರಿಯರ್ ಗಮನಿಸಿ ಆತನಿಗೆ ಸ್ಥಳದಲ್ಲಿಯೇ ಶಿಕ್ಷೆ ನೀಡಿದ್ದಾರೆ. ಪೌರಾಯುಕ್ತ ಮಹಾವೀರ ಬೋರನ್ನ ಅವರು, ಆತನ ಅಂಗಿ ಬಿಚ್ಚಿಸಿ ಅದರಿಂದಲೇ ಉಗಿದ ಜಾಗ ಕ್ಲೀನ್ ಮಾಡಿಸಿದ್ದಾರೆ.