`ಗಾಳಿಯಲ್ಲಿ ಕೊರೊನಾ ಹರಡುವುದಿಲ್ಲ’ -ಕೋಡಿಮಠಶ್ರೀ ಭವಿಷ್ಯ

ಹಾಸನ: ಕೆಲತಿಂಗಳ ಹಿಂದೆ ಕೊರೊನಾ ಬಗ್ಗೆ ಅರಸೀಕೆರೆಯ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ನುಡಿದಿದ್ದ ಭವಿಷ್ಯದಲ್ಲಿ ಮುಂದೆ ವೈರಸ್ ಹಾವಳಿ ಜಾಸ್ತಿಯಾಗಲಿದೆ ಎಂದಿದ್ದರು. ಈಗ ಶ್ರೀಗಳು ಮತ್ತೆ ಭವಿಷ್ಯ ನುಡಿದಿದ್ದು ಜೂನ್ 2020ರಿಂದ ಮಾರ್ಚ್ 2021ರವರೆಗೆ ವಿಶ್ವ ಹಲವು ವಿಕೋಪಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಸೆಪ್ಟಂಬರ್ ಕೊನೆಯ ವಾರದಿಂದ ಗಡಿಯಲ್ಲಿನ ಸಮಸ್ಯೆ ಉಲ್ಬಣಗೊಳ್ಳಲಿದೆ. ಆಗಸ್ಟ್ 20ರಿಂದ ಸೆಪ್ಟಂಬರ್ 21ರ ಅವಧಿಯಲ್ಲಿ ಚೀನಾ ಮತ್ತು ಪಾಕಿಸ್ತಾನದಿಂದ ಹೆಚ್ಚಿನ ಪ್ರತಿರೋಧ ಎದುರಾಗಲಿದೆ ಎಂದಿದ್ದಾರೆ. ಆಶ್ವೀಜ, ಕಾರ್ತಿಕ ಮಾಸಗಳಲ್ಲಿ, ಕೊರೊನಾ ಹಾವಳಿ ಹೆಚ್ಚಾಗಲಿದೆ. ಹಳ್ಳಿಹಳ್ಳಿಗಳಲ್ಲೂ ಕೊರೊನಾ ಸೋಂಕು ಹರಡಲಿದೆ. ಜನರು ಎಚ್ಚರಿಕೆಯಿಂದ ಇರಬೇಕು, ಸರಕಾರದ ಮಾರ್ಗಸೂಚಿ ಪಾಲಿಸುವುದನ್ನು ಜನರು ಮರೆಯಬಾರದು’ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಯಾವುದೇ ಆತಂಕ ಪಡಬೇಕಾಗಿಲ್ಲ. ಎಲ್ಲಾ ಒಳಿತಾಗುತ್ತದೆ `ಇನ್ನೂ ಕೆಲ ತಿಂಗಳು ಕೊರೊನಾ ಅಟ್ಟಹಾಸ ಇರಲಿದೆ. ಕೊರೊನಾ ಗಾಳಿಯಲ್ಲಿ ಸಂಚಾರ ಮಾಡುವುದಿಲ್ಲ. ಜನರು ಸುರಕ್ಷತೆ ಮತ್ತು ಸ್ವಚ್ಚತೆಗೆ ಆದ್ಯತೆ ನೀಡಬೇಕು. ಸಾರ್ವಜನಿಕರು, ಯಾವುದೇ ಆತಂಕ ಪಡಬೇಕಾಗಿಲ್ಲ. ಎಲ್ಲಾ ಒಳಿತಾಗುತ್ತದೆ’ ಎಂದು ಕೋಡಿಶ್ರೀಗಳು ಹೇಳಿದ್ದಾರೆ.

Leave a Reply

Your email address will not be published. Required fields are marked *