ಗಾಲ್ವಾನ್ ಘರ್ಷಣೆಯಲ್ಲಿ ನೂರಕ್ಕೂ ಹೆಚ್ಚು ಚೀನಾ ಸೈನಿಕರು ಬಲಿ!

ಬೀಜಿಂಗ್: ಗಾಲ್ವಾನ್ ಕಣಿವೆಯಲ್ಲಿ ಕಳೆದ ಜೂನ್ 15ರಂದು ನಡೆದ ಭಾರತ-ಚೀನಾ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದರೆ ನೂರಕ್ಕೂ ಹೆಚ್ಚು ಚೀನಿ ಸೈನಿಕರು ಹತರಾಗಿದ್ದಾರೆ ಎಂಬ ಸತ್ಯಾಂಶವನ್ನು ಚೀನಾದ ನಿವೃತ್ತ ಉನ್ನತ ಸೇನಾಧಿಕಾರಿ ಜಿಯಾನ್ಲಿ ಯಾಂಗ್ ದೃಢಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಸಂಘರ್ಷದಲ್ಲಿ ಭಾರತದ 20 ಯೋಧರು ಹತರಾಗಿದ್ದರೆ, ನಮ್ಮ ಸೇನೆಯ ನೂರಕ್ಕೂ ಹೆಚ್ಚು ಸೈನಿಕರು ಬಲಿಯಾಗಿದ್ದಾರೆ ಎಂದು ಹೇಳಿದ್ದಾರೆ.
ಗಾಲ್ವಾನ್ ದಾಳಿಯಲ್ಲಿ ಚೀನಾ ಸೈನಿಕರು ಹತರಾಗಿಲ್ಲ ಎಂದು ಆರಂಭದಲ್ಲಿ ಚೀನಾ ಹೇಳಿಕೆ ನೀಡಿತ್ತು. ಆದರೆ ಜಿಯಾನ್ಲಿ ಯಾಂಗ್ ನೂರಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿದ್ದಾರೆ ಎಂದು ಟ್ವೀಟ್ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ.