ಗಂಜಿಮಠ ಸುತ್ತಮುತ್ತ ಕೊರೊನಾ ಸ್ಫೋಟ ಸಾಧ್ಯತೆ !?

ಕುಪ್ಪೆಪದವು: ಇಲ್ಲಿನ ಕಿಲೆಂಜಾರು, ಕಲ್ಲಾಡಿ ಎಂಬಲ್ಲಿ ಎರಡು ಮತ್ತು ಮುತ್ತೂರು ಗ್ರಾಮದಲ್ಲಿ ಎರಡು ಕೋವಿಡ್-19 ಪಾಸಿಟಿವ್ ಕಂಡು ಬಂದಿದ್ದು ಇವರೆಲ್ಲರೂ  ಗಂಜಿಮಠದ ಕೈಗಾರಿಕಾ ವಲಯದಲ್ಲಿರುವ ಫ್ಯಾಕ್ಟರಿಯೊಂದರ ಕೆಲಸಗಾರರಾಗಿದ್ದು, ಇಲ್ಲಿ  ಕೋರೋನಾ  ಸ್ಪೋಟಗೊಳ್ಳುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಪಾಸಿಟಿವ್ ಕಂಡುಬಂದಿರುವವರ ಮನೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು ಪಾಸಿಟಿವ್ ಸಂಖ್ಯೆ ಹೆಚ್ಚಾಗುವ ಎಲ್ಲಾ ಲಕ್ಷಣಗಳು ಕಂಡುಬರುತ್ತಿವೆ. ಈ ಫ್ಯಾಕ್ಟರಿಯಲ್ಲಿ ಹೊರರಾಜ್ಯದವರೂ ಸೇರಿದಂತೆ ಸಾವಿರಾರು ಮಂದಿ ಕೆಲಸಗಾರರಿದ್ದಾರೆ.  
ಸಾರ್ವಜನಿಕರ ಆಕ್ರೋಶ:  ಪಾಸಿಟಿವ್ ಕಂಡುಬಂದರೆ ನಾಲ್ಕೈದು ಜನರಿರುವ ಮನೆಯನ್ನೇ ಸೀಲ್ ಡೌನ್ ಮಾಡಲಾಗುತ್ತಿದೆ ಆದರೆ ಸಾವಿರಾರು ಕೆಲಸಗಾರರು ಇರುವಲ್ಲಿ ಪಾಸಿಟಿವ್ ಕಂಡುಬಂದರೂ ಇಲ್ಲಿ ಸೀಲ್ ಡೌನ್ ಮಾಡದಿರುವ ಬಗ್ಗೆ ಸಾರ್ವಜನಿಕರಿಂದ  ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ.  ಅಲ್ಲದೆ ಜಿಲ್ಲಾಡಳಿತ ,ಜನ ಪ್ರತಿನಿದಿಗಳು ,ಸಂಘಸಂಸ್ಥೆಗಳು ಮೌನವಾಗಿದ್ದು, ಸೋಂಕು ಹರಡುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಕಾರ್ಮಿಕರು ಸಂಪರ್ಕ ಹೊಂದಿರುವ ಮಳಲಿ, ಗಂಜಿಮಠ, ಎಡಪದವು, ಕುಪ್ಪೆಪದವು, ಇರುವೈಲು, ಮುತ್ತೂರು, ಕುಳವೂರು ಪ್ರದೇಶಗಳಲ್ಲಿ ಸೋಂಕು ವ್ಯಾಪಕವಾಗಿ ಹರಡುವ ಅಪಾಯವಿದ್ದು, ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುವ ಭೀತಿ ಸಾರ್ವಜನಿಕರಲ್ಲಿ ಎದುರಾಗಿದೆ. ಹೊರರಾಜ್ಯದಿಂದ ಉದ್ಯೋಗಕ್ಕಾಗಿ ಇಲ್ಲಿಗೆ ಬಂದಿರುವ ಕಾರ್ಮಿಕರು ಗಂಜಿಮಠ ಪಂಚಾಯತ್ ವ್ಯಾಪ್ತಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು  ಕೋರೋನಾ ಪ್ರಕರಣಗಳು ಜಾಸ್ತಿಯಾಗುವ ಸಾಧ್ಯತೆ ದಟ್ಟವಾಗಿದೆ. 

Leave a Reply

Your email address will not be published. Required fields are marked *