ಕ್ವಾರಂಟೈನ್ ಭಯದಿಂದ ರಸ್ತೆಯಲ್ಲೇ ಮದುವೆ!

ಮೈಸೂರು: ಗಡಿಯನ್ನು ಉಲ್ಲಂಘಿಸಿ ತೆರಳಿದರೆ ಕ್ವಾರಂಟೈನ್ ಗೆ ಒಳಗಾಗಬೇಕು ಎಂಬ ಭಯದಿಂದ ಜೋಡಿ ಚಾಮರಾಜನಗರದ ಕೇರಳ-ಕರ್ನಾಟಕ ಗಡಿ ಮೂಲೆಹೊಳೆ ಚೆಕ್‍ಪೆÇೀಸ್ಟ್ ಬಳಿಯ ಮುಖ್ಯರಸ್ತೆಯ ಪಕ್ಕದಲ್ಲೇ ಮದುವೆಯಾದ ಘಟನೆ ನಡೆದಿದೆ. ಕೇರಳ ಮೂಲದ ಯುವಕ ಹಾಗೂ ಶಿವಮೊಗ್ಗ ಜಿಲ್ಲೆಯ ಯುವತಿ ವಿಭಿನ್ನ ರೀತಿಯಲ್ಲಿ ಮದುವೆಯಾಗಿದ್ದು ಈ ವೇಳೆ ನೆಂಟರಿಷ್ಟರು ಬೆರಳೆಣಿಕೆ ಸಂಖ್ಯೆಯಲ್ಲಿ ಹಾಜರಿದ್ದರು.
ಕೇರಳ ಮೂಲದ ಯುವಕನಿಗೆ ಶಿವಮೊಗ್ಗ ನಿವಾಸಿ ಯುವತಿಯ ಜೊತೆ ಮದುವೆ ನಿಶ್ಚಯವಾಗಿತ್ತು. ಅವರು ಮದುವೆಯಾಗಲು ನಿರ್ಧರಿಸಿದ್ದು ಇವರಿಗೆ ಲಾಕ್ ಡೌನ್ ನಿಯಮಗಳಿಂದ ಅಡ್ಡಿಯುಂಟಾಗಿತ್ತು. ಅಂತರ್ ರಾಜ್ಯ ಪ್ರಯಾಣ ಮಾಡಿದರೆ ಕ್ವಾರಂಟೈನ್ ಆಗಬೇಕಾಗುತ್ತದೆ ಎಂಬ ಕಾರಣಕ್ಕೆ ರಸ್ತೆಯಲ್ಲಿಯೇ ಮದುವೆಯಾಗುವ ನಿರ್ಧಾರಕ್ಕೆ ಬಂದಿತ್ತು. ಕಳೆದ ತಿಂಗಳು ನಿಶ್ಚಿತಾರ್ಥವಾಗಿದ್ದು ಈಗ ವಿವಾಹ ಬಂಧನಕ್ಕೆ ಒಳಪಟ್ಟಿದ್ದಾರೆ.

Leave a Reply

Your email address will not be published. Required fields are marked *