ಕ್ವಾರಂಟೈನ್ ಉಲ್ಲಂಘಿಸಿದ ಕೆವಿಜಿಯ ಐವರು ವೈದ್ಯರ ವಿರುದ್ಧ ಪ್ರಕರಣ ದಾಖಲು

ಸುಳ್ಯ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಸುಳ್ಯ ಕೆವಿಜಿ ವೈದ್ಯಕೀಯ ಕಾಲೇಜಿನ ಐವರು ವೈದ್ಯರ ವಿರುದ್ಧ ಜಿಲ್ಲಾಡಳಿತದ ಆದೇಶನುಸಾರ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆವಿಜಿ ವೈದ್ಯಕೀಯ ಕಾಲೇಜಿನ ವೈದ್ಯರುಗಳಾದ ವಾನನ್ಸ್, ದೇವರಾಮನ್, ಪ್ರೇಮ್ ಕುಮಾರ್ ಜಿ., ಪ್ರಬೀನ್ ಜಾರ್ಜ್ ಹಾಗೂ ಶೃತಿ ಸಿ. ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಜು.15 ರಂದು ಕ್ವಾರಂಟೈನ್ ಉಲ್ಲಂಘಿಸಿದ್ದ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಪಿಎಸ್ ಆಧಾರಿತ ಮಾಹಿತಿ ಪಡೆಯಲಾಗಿತ್ತು.
ಆಸ್ಪತ್ರೆಯಲ್ಲಿದ್ದ ಸಿಬ್ಬಂದಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ವೈದ್ಯರುಗಳನ್ನು 14 ದಿನಗಳ ಕಾಲ ಕ್ವಾರಂಟೈನ್ ಒಳಪಡಿಸಲಾಗಿತ್ತು. ಆದರೆ ಐವರು ವೈದ್ಯರು ನಿಯಮ ಉಲ್ಲಂಘಿಸಿ ಊರಿಡೀ ಸುತ್ತಾಡುತ್ತಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆ ಪ್ರಕರಣ ದಾಖಲಾಗಿದೆ.