ಕೋವಿಡ್ ಸೋಂಕಿತ ಕ್ರೈಸ್ತ ವ್ಯಕ್ತಿಯ ಅಂತ್ಯಕ್ರಿಯೆ ನೆರವೇರಿಸಿದ ಎಸ್ಕೆ ಎಸ್ಸೆಸ್ಸೆಫ್ ವಿಖಾಯ ಕಾರ್ಯಕರ್ತರು!

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ದೇವಗಿರಿ ನಿವಾಸಿ, ಪ್ರಸ್ತುತ ಮೂಡಬಿದಿರೆಯಲ್ಲಿ ನೆಲೆಸಿ ಬಸ್ ಚಾಲಕರಾಗಿದ್ದ 41 ವರ್ಷದ ವ್ಯಕ್ತಿ ಕೋವಿಡ್ ನಿಂದ ಮೃತಪಟ್ಟಿದ್ದು ಅವರ ಅಂತ್ಯಕ್ರಿಯೆ ಯನ್ನು ಸೇವಾ ರೂಪದಲ್ಲಿ ಮಾಡಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯ ಗಂಟಲದ್ರವ‌ ಮಾದರಿ ಪರೀಕ್ಷೆ ನಡೆಸಿದ್ದಾಗ ಅವರಿಗೆ ಕೊರೋನ ಧೃಡ ಪಟ್ಟಿತ್ತು. ಅವರು ಸೋಮವಾರ ಮೃತಪಟ್ಟಿದ್ದರು. ಸಂಬಂಧಿಕರು ಅಂತ್ಯಕ್ರಿಯೆ ನಡೆಸುವುದೆಂದು ತೀರ್ಮಾನಿಸಿದ್ದರು. ಸರಕಾರದ ಎಲ್ಲಾ ನಿಯಮಗಳನ್ನು ಪೂರ್ತಿಗೊಳಿಸಿ ಶವವನ್ನು ದೇವಗಿರಿಗೆ ಆಂಬುಲೆನ್ಸ್ ಮೂಲಕ ತಂದಾಗ ಯಾರೂ ಕೂಡ ಸಂಬಂಧಿಕರು ಹತ್ತಿರ ಬಾರದೆ ಇದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಡ್ರೈವರ್ ಎಸ್ಕೆ ಎಸ್ಸೆಸ್ಸೆಫ್ ವಿಖಾಯ ಜಿಲ್ಲಾ ನೇತಾರರಿಗೆ ತಿಳಿಸಿದಾಗ ತಕ್ಷಣ ವಿಖಾಯ ಜಿಲ್ಲಾ ಚೆಯರ್ ಮ್ಯಾನ್ ಇಸ್ಮಾಯಿಲ್ ತಂಙಳ್, ಕನ್ವೀನರ್ ಆಸಿಫ್ ಕಬಕ, ಉಪ್ಪಿನಂಗಡಿ ವಲಯ ವಿಖಾಯ ಕಾರ್ಯದರ್ಶಿ ಸಿದ್ದೀಕ್ ನೀರಾಜೆ, ಸ್ಥಳೀಯ ಅಜಿತ್ ಗಂಡಿಬಾಗಿಲು ಅವರ ಸಹಕಾರದೊಂದಿಗೆ ಅಂತ್ಯಕ್ರಿಯೆ ಪೂರ್ತಿಗೊಳಿಸಿದ್ದಾರೆ.
ಕೊರೋನದಿಂದ ಮರಣ ಹೊಂದಿದ ಕ್ರಿಶ್ಚಿಯನ್ ವ್ಯಕ್ತಿಯ ಶವಸಂಸ್ಕಾರ ಮಾಡುವ‌ ಮೂಲಕ ವಿಶೇಷ ಎತ್ತಿಹಿಡಿದ ಎಸ್ಕೆಎಸ್ಸೆಸ್ಸೆಫ್ ವಿಖಾಯ ತಂಡ ಸಮಾಜಕ್ಕೆ ಮಾದರಿಯಾಗಿದೆ.

Leave a Reply

Your email address will not be published. Required fields are marked *