ಕೋವಿಡ್ ವಾರಿಯರ್ ಕೊರೋನಾಕ್ಕೆ ಬಲಿ

ಮೂಡಬಿದ್ರೆ: ಕೊರೋನಾ ಲಾಕ್ ಡೌನ್ ಸಮಯದಲ್ಲಿ ವಾರಿಯರ್ ಆಗಿ ಶ್ರಮಿಸಿದ್ದ ವ್ಯಕ್ತಿಯೋರ್ವರು ಬಹು ಅಂಗಾಗ ವೈಫಲ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕೊಡ್ಯಡ್ಕ ನಿವಾಸಿ ಕೆಲತಿಂಗಳ ಹಿಂದೆ ಸ್ವಂತ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದರು. ಲಾಕ್ ಡೌನ್ ಸಮಯದಲ್ಲಿ ಬಡ ಕುಟುಂಬಗಳನ್ನು ಗುರುತಿಸಿ ಕಿಟ್ ನೀಡುವ ಮೂಲಕ ದಾಖಲೆಯ ನೆರವು ನೀಡಿದ್ದರು. ಇತ್ತೀಚೆಗೆ ಇವರ ದೇಹದ ಕೆಲ ಅಂಗಾಗಗಳು ವೈಪರೀತ್ಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ತೀವ್ರ ಉಸಿರಾಟದ ಸಮಸ್ಯೆ ಎದುರಾಗಿ ಕೋಮ ಸ್ಥಿತಿಯಲ್ಲಿದ್ದ ಇವರನ್ನು ಮತ್ತೆ ಮಂಗಳೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಮುಂಜಾನೆ ಸಾವನ್ನಪ್ಪಿದ್ದಾರೆ. ಇವರ ಕೊರೋನಾ ವರದಿಯೂ ಪಾಸಿಟಿವ್ ಬಂದಿರುವುದಾಗಿ ತಿಳಿದು ಬಂದಿದೆ