ಕೋವಿಡ್ ಆಸ್ಪತ್ರೆಯಲ್ಲಿ `ಪಿಲಿ ನಲಿಕೆ’: ಕುಡ್ಲದ ಹುಡುಗಿಯರ ಭರ್ಜರಿ ಸ್ಟೆಪ್!

ಮಂಗಳೂರು: ನಗರದ ಕೋವಿಡ್ ಆಸ್ಪತ್ರೆಯೊಂದರಲ್ಲಿ ಕೊರೊನಾ ಸೋಂಕಿತರಾಗಿ ದಾಖಲಾಗಿದ್ದ ಹುಡುಗಿಯರು ಹುಲಿ ವೇಷದ ಕುಣಿತಕ್ಕೆ ಹಾಡು ಹಾಕಿ ಭರ್ಜರಿ ಸ್ಪೆಪ್ ಹಾಕಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಯುವತಿಯರು ಬಿಂದಾಸ್ ಆಗಿ ಸ್ಟೆಪ್ ಹಾಕಿದ್ದು ಕನ್ನಡ, ತಮಿಳು ಹಾಡಿಗೆ ಕುಣಿದಿದ್ದಾರೆ. ಜಗತ್ತೇ ಕೊರೊನಾ ಅಟ್ಟಹಾಸಕ್ಕೆ ನಲುಗಿಹೋಗಿದ್ದು ಜನರು ಆತಂಕದಲ್ಲೇ ದಿನ ಕಳೆಯುತ್ತಿರುವಾಗ ಕೋವಿಡ್ ಆಸ್ಪತ್ರೆಯಲ್ಲಿ ಹುಡುಗಿಯರು ಮನಸೋ ಇಚ್ಛೆ ಕುಣಿದಿರುವುದಕ್ಕೆ ಜಾಲತಾಣಿಗರು ಶಹಬ್ಬಾಸ್ ಗಿರಿ ನೀಡಿದ್ದಾರೆ.

Where is the video??