ಕೋವಿಡ್ನಿಂದ ಮೃತಪಟ್ಟ ಶಿಶುವಿನ ಅಂತ್ಯಸಂಸ್ಕಾರ ನಡೆಸಿದ ಬಜರಂಗ ದಳದ ಕಾರ್ಯಕರ್ತರು

ಮಂಗಳೂರು: ಕೊರೊನಾದಿಂದ ಮೃತಪಟ್ಟ ಮಗುವಿನ ಅಂತ್ಯಸಂಸ್ಕಾರ ನಡೆಸುವ ಮೂಲಕ ಬಜರಂಗದಳದ ಕಾರ್ಯಕರ್ತರು ಮಾದರಿಯಾಗಿದ್ದಾರೆ.

ಪುತ್ತೂರಿನ ಎರಡು ತಿಂಗಳ ಮಗು ಕೊರೊನಾ ಸೋಂಕಿನಿಂದ ಅಸುನೀಗಿತ್ತು. ಬಜರಂಗದಳದ ಕಾರ್ಯಕರ್ತರು ಮೃತ ಮಗುವಿನ ದೇಹದ ಅಂತ್ಯಸಂಸ್ಕಾರವನ್ನು ನಂದಿಗುಡ್ಡೆ ಸ್ಮಶಾನದಲ್ಲಿ ದಫನ ಮಾಡುವ ಮೂಲಕ ನೆರವೇರಿಸಿದರು.
ಸೂಕ್ತ ವಿಧಿವಿಧಾನದ ಮೂಲಕ ಅಂತ್ಯಸಂಸ್ಕಾರ ನಡೆಸಲಾಯಿತು. ಈ ವೇಳೆ ಕಾರ್ಯಕರ್ತರು ಪಿಪಿಇ ಕಿಟ್ ಧರಿಸಿ ಸಾಕಷ್ಟು ಸುರಕ್ಷಾ ಕ್ರಮಗಳನ್ನು ಕೈಗೊಂಡಿದ್ದರು. ಅಂತ್ಯಸಂಸ್ಕಾರದ ದೃಶ್ಯ ಎಂತಹಾ ಕಲ್ಲು ಹೃದಯಿಗಳನ್ನೂ ಕರಗಿಸುವಂತಿತ್ತು.
