ಕೊರೋನಾ ಎಫೆಕ್ಟ್: ಜು.6ರಿಂದ ಹಳೆಯಂಗಡಿ ಸ್ವಯಂ ಪ್ರೇರಿತ ಬಂದ್!

ಮಂಗಳೂರು: ದಿನೇ ದಿನೇ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಳೆಯಂಗಡಿ ಪರಿಸರವನ್ನು ಜು.6ರ ಸೋಮವಾರದಿಂದ ಸ್ವಯಂಪ್ರೇರಿತರಾಗಿ ಬಂದ್ ಮಾಡಲು ವರ್ತಕರು, ಸಾರ್ವಜನಿಕರು ಮುಂದಾಗಿದ್ದಾರೆ. ಹಳೆಯಂಗಡಿ ಪರಿಸರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಲ್ಲಲ್ಲಿ ಕಂಡುಬರುತ್ತಿದ್ದು ವೈರಾಣು ಇನ್ನಷ್ಟು ಹರಡದಂತೆ ತಡೆಯಲು ಜನರು ಸ್ವಯಂ ನಿರ್ಬಂಧ ಹಾಕಲು ಮುಂದಾಗಿದ್ದಾರೆ. ಜು.6 ಸೋಮವಾರದಿಂದ ಸ್ವಯಂ ಪ್ರೇರಿತವಾಗಿ ಪೇಟೆಯನ್ನು ಲಾಕ್ಡೌನ್ ಮಾಡಲು ತೀರ್ಮಾನಿಸಲಾಗಿದ್ದು ಬೆಳಗ್ಗೆ 7 ಗಂಟೆಯಿಂದ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶವಿರುತ್ತದೆ. ಮಧ್ಯಾಹ್ನ 1:ಗಂಟೆಯ ವೇಳೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ವರ್ತಕರಿಗೆ ಮನವಿ ಮಾಡಲಾಗಿದೆ. ಕಾರು, ರಿಕ್ಷಾ, ಟೆಂಪೋ ಚಾಲಕರು ಕೂಡಾ ಸಹಕಾರ ವ್ಯಕ್ತಪಡಿಸಿದ್ದಾರೆ.