ಕೊರೊನಾ ಹಬ್ಬಿಸಲು ಸ್ಪರ್ಧೆ ಆಯೋಜನೆ!

ವಾಷಿಂಗ್ಟನ್: ವಿಶ್ವಾದ್ಯಂತ ಕೊರೊನಾ ಮಣಿಸಲು ವೈದ್ಯರು, ಸಂಶೋಧಕರು ಅವಿರತ ಹೋರಾಟದಲ್ಲಿ ತೊಡಗಿರುವಾಗ ಅಮೆರಿಕಾದಲ್ಲಿ ವಿಲಕ್ಷಣ, ಆತಂಕಕಾರಿ ಸ್ಪರ್ಧೆ ನಡೆದಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಮಹಾಮಾರಿ ಕೊರೊನಾ ಹಬ್ಬಿಸಲು ಯುಎಸ್‍ನ ಅಲಬಾಮಾದ ಟಸ್ಕಲೂಸಾ ಎಂಬಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಈ ಹುಚ್ಚಾಟದ ಸ್ಪರ್ಧೆಗೆ ಕೊರೊನಾ ಪಾಸಿಟಿವ್ ಬಂದವರನ್ನು ಉದ್ದೇಶಪೂರ್ವಕವಾಗಿ ಕರೆಸಲಾಗಿತ್ತು. ಕೊರೊನಾ ಬಾರದವರನ್ನು ಆಹ್ವಾನಿಸಲಾಗಿತ್ತು. ಕೊರೊನಾ ಬಾರದವರು ಪಾಸಿಟಿವ್ ಬಂದವರ ಜೊತೆ ಪಾರ್ಟಿ ಮಾಡಬೇಕು. ಈ ಮೂಲಕ ಯಾರಿಗೆ ಕೊರೊನಾ ಮೊದಲು ಬರುತ್ತದೋ ಅವರಿಗೆ ಬಹುಮನ ನೀಡಲಾಗುತ್ತದೆ ಎಂದು ಆಯೋಜಕರು ಮೊದಲೇ ತಿಳಿಸಿದ್ದರು. ಪಾರ್ಟಿಗೆ ಬಂದವರು ಪಾಟ್ ಒಂದರಲ್ಲಿ ಹಣವನ್ನು ಹಾಕಬೇಕು. ಮೊದಲು ಯಾರಿಗೆ ಕೊರೊನಾ ಬರುತ್ತದೋ ಅವರಿಗೆ ಈ ಪಾಟ್‍ನಲ್ಲಿ ಸಂಗ್ರಹವಾದ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ ಎಂದು ಆಯೋಜಕರು ಹೇಳಿದ್ದರು. ನಗರದಲ್ಲಿ ಕೊರೊನಾ ಹರಡಿಸುವ ಸ್ಪರ್ಧೆ ನಡೆದಿರುವುನ್ನು ಟಸ್ಕಲೂಸಾ ಮೇಯರ್ ಒಪ್ಪಿಕೊಂಡಿದ್ದಾರೆ. ಆದರೆ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Reply

Your email address will not be published. Required fields are marked *