ಕೊರೊನಾ ಭೀತಿಗೆ ಕುಡಿತ ಬಿಟ್ಟ ಕುಡುಕರು: ರಾಜ್ಯ ಸರ್ಕಾರದ ಆದಾಯದಲ್ಲಿ ತೀವ್ರ‌ ಕುಸಿತ

ಬೆಂಗಳೂರು : ಕೊರೊನಾ ಸೋಂಕಿನ ಆರ್ಭಟದಿಂದ ಈಗಾಗಲೇ ಆರ್ಥಿಕವಾಗಿ ಸಾಕಷ್ಟು ಸಂಕಷ್ಟದಲ್ಲಿರುವ ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳಲ್ಲಿ ಒಂದಾದ ಮದ್ಯ ಮಾರಾಟ ಶೇ .33.22 ರಷ್ಟು ಕುಸಿಯುವ ಮೂಲಕ ಮತ್ತೊಂದು ಆಘಾತ ಉಂಟಾಗಿದೆ.

2019-20ನೇ ಸಾಲಿನ ಬಜೆಟ್‌ನಲ್ಲಿ ಮದ್ಯಮಾರಾಟದಿಂದ 20,950 ಕೋಟಿ ರು. ಆದಾಯ ನಿರೀಕ್ಷಿಸಿದ್ದ ಸರ್ಕಾರ, ಜೂನ್ ವೇಳೆಗೆ 5,760.14 ಕೋಟಿ ರು. ಆದಾಯ ಗಳಿಸಿತ್ತು. ಅಂತೆಯೇ 2020-21ರ ಬಜೆಟ್‌ನಲ್ಲಿ 22,700 ಕೋಟಿ ರು . ಆದಾಯ ನಿರೀಕ್ಷೆ ಮಾಡಿದ್ದು , ಜೂನ್ ವೇಳೆಗೆ 3,848.76 ಕೋಟಿ ರು . ಆದಾಯ ಗಳಿಸಿದೆ . ಆದರೆ , ಕಳೆದ ಸಾಲಿನ ಈ ಅವಧಿಗೆ ಹೋಲಿಕೆ ಮಾಡಿದರೆ 1913.38 ಕೋಟಿ ರು. ಅಂದರೆ , ಶೇ .33.22 ರಷ್ಟು ಆದಾಯ ಕುಸಿತವಾಗಿದೆ.

ಬಜೆಟ್‌ನ ಒಟ್ಟು ನಿರೀಕ್ಷಿತ ಆದಾಯಕ್ಕೆ ಹೋಲಿಕೆ ಮಾಡಿದರೆ ಶೇ .16.95 ರಷ್ಟು ಆದಾಯ ಕುಸಿದೆ . ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ನಡುವೆ ಮದ್ಯ ಸೇವನೆ ಮಾಡುವವರ ಸಂಖ್ಯೆ ಕಡಿಮೆಯಾಗಿದ್ದು, ಮದ್ಯಮಾರಾಟ ಕುಸಿತವಾಗಿ ಅಬಕಾರಿ ಇಲಾಖೆಗೆ ಭಾರೀ ನಿರಾಸೆ ಮೂಡಿಸಿದೆ.

ಸೋಂಕಿನ ಭೀತಿಯಲ್ಲಿ ಜನ ಮನೆಗಳಿಂದ ಆಚೆ ಬರಲು ಭಯಪಡುತ್ತಿರುವುದು ಒಂದೆಡೆಯಾದರೆ , ಮತ್ತೊಂದೆಗೆ ಮದ್ಯಪ್ರಿಯರು ಮದ್ಯಪಾನದಿಂದ ದೂರ ಉಳಿಯು ಹೀಗಾಗಿ ಮದ್ಯ ಮಾರಾಟದಲ್ಲಿ ಭಾರೀ ಪ್ರಮಾಣದ‌‌ಲ್ಲಿ ಆದಾಯ ಕುಸಿತ ಕಂಡಿದೆ.

ಬಿಯರ್ ನಿಂದ ತಂಪಾಗಿರುವುದರಿಂದ ಶೀತವಾಗಬಹುದೆಂದು ಅದರಿಂದ ದೂರ ಉಳಿದಿದ್ದಾರೆ.

Leave a Reply

Your email address will not be published. Required fields are marked *