ಕೊರೊನಾ ನೈಟ್ ಕರ್ಫ್ಯೂ ಮಧ್ಯೆ ಅಶೋಕ್ ಬರ್ತ್ ಡೇ ಪಾರ್ಟಿ!

ಚಿಕ್ಕಮಗಳೂರು: ರಾಜ್ಯ ಸರಕಾರ ರಾತ್ರಿ 8 ಗಂಟೆಯ ನಂತರ ಕರ್ಫ್ಯೂ ವಿಧಿಸಿದ್ದು ಜನಸಾಮಾನ್ಯರ ಓಡಾಟಕ್ಕೆ ಬ್ರೇಕ್ ಹಾಕಿದೆ. ಆದರೆ ರಾಜ್ಯ ಕಂದಾಯ ಸಚಿವ ಆರ್.ಅಶೋಕ್ ಮಾತ್ರ ನಿನ್ನೆ ಜನ್ಮದಿನ ಆಚರಿಸಲು ನಗರದ ಖಾಸಗಿ ಹೋಟೆಲ್ ಗೆ ಬಂದಿದ್ದು ಈ ಮೂಲಕ ತಮ್ಮದೇ ಸರಕಾರದ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಕೈಮರ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ಅಶೋಕ್ ಬರ್ತ್ಡೇ ಪಾರ್ಟಿ ಆಯೋಜಿಸಿದ್ದು ಇದಕ್ಕೆ ಜಗದೀಶ್ ಶೆಟ್ಟರ್, ಸಿ.ಟಿ. ರವಿ ಸಹಿತ ಹತ್ತಾರು ಮಂದಿ ಗಣ್ಯರು ಭೇಟಿ ನೀಡಿದ್ದರು. ರಾತ್ರಿ ಜನರು ಸಂಚರಿಸುವುದು, ಒಂದೆಡೆ ಸೇರುವುದರಿಂದ ಕೊರೊನಾ ಸೋಂಕು ಹೆಚ್ಚುತ್ತದೆ ಎಂದು ಇತ್ತೀಚೆಗಷ್ಟೇ ಅಶೋಕ್ ಹೇಳಿದ್ದರು.