ಕೊರೊನಾ ನಿಯಮ ಮೀರಿ ಅನಗತ್ಯ ಸಂಚಾರಕ್ಕೆ ಬ್ರೇಕ್: ಕಠಿಣ ಕ್ರಮಕ್ಕೆ ಮುಂದಾದ ಮೂಡಬಿದ್ರೆ ಪೊಲೀಸರು

ಮೂಡಬಿದ್ರೆ : ಯಾವುದೇ ಅಗತ್ಯ ಕಾರಣಗಳಿಲ್ಲದೆ ಶೋಕಿಗಾಗಿ ಜಾಲಿ ರೈಡ್ ಮಾಡುವವರಿಗೆ ಪೊಲೀಸರು ಲಾಠಿ ಜೊತೆ ಭಾರೀ ದಂಡದ ಬಿಸಿ ಮುಟ್ಟಿಸಲು ಸಿದ್ಧತೆ ನಡೆಸಿದ್ದಾರೆ.ಜೊತೆಗೆ ಕೊರೋನಾ ನಿಯಂತ್ರಣದ ನಿಯಮಗಳನ್ನು ಉಲ್ಲಂಘಿಸುವವರು ಕೂಡಾ ಪೊಲೀಸರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.

ಜಿಲ್ಲೆ ಮತ್ತು ಮೂಡಬಿದ್ರೆ ಭಾಗದಲ್ಲಿ ಕೊರೋನಾ ಸೋಂಕು ಹರಡುವಿಕೆಯ ಬಗ್ಗೆ ಎಚ್ಚೆತ್ತುಕೊಂಡ ಮೂಡಬಿದ್ರೆ ಪೊಲೀಸರು ಸಾರ್ವಜನಿಕ ಸ್ಥಳಗಳಲ್ಲಿ ಜನ ಸಂದಣಿಯನ್ನು ನಿಯಂತ್ರಿಸುವಲ್ಲಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗಿದೆ.

ಸಾಮಾಜಿಕ ಅಂತರ, ಮುಖ ಕವಚ ಇನ್ನಿತರ ಕೊರೊನಾ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸುವವರ ಮೇಲೆ ಲಾಠಿ ಪ್ರಹಾರದೊಂದಿಗೆ ದಂಡ ವಿಧಿಸಲು ಪೊಲೀಸರು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಪೂರ್ವಭಾವಿಯಾಗಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಧ್ವನಿವರ್ಧಕದ ಮೂಲಕ ಮೂಡಬಿದ್ರೆ ಪೊಲೀಸ್ ನಿರೀಕ್ಷಕ ಬಿ.ಎಸ್.ದಿನೇಶ್ ಕುಮಾರ್ ಎಚ್ಚರಿಕೆ ನೀಡಿದ್ದು ಅನವಶ್ಯಕ ಸಂಚಾರಿಗಳನ್ನು ಪೊಲೀಸರು ದಂಡನೆಗೆ ಗುರುಯಾಗಿಸುವ ಬಗ್ಗೆ ಪೊಲೀಸ್ ಮೂಲಗಳು ತಿಳಿಸಿವೆ.

ಆದುದರಿಂದ ಅಗತ್ಯವಿದ್ದರೆ ಮಾತ್ರ ಸಾರ್ವಜನಿಕರು ಮನೆಯಿಂದ ಹೊರ ಬರುವುದು ಸೂಕ್ತ.

Leave a Reply

Your email address will not be published. Required fields are marked *