ಕೊರೊನಾ ಇರಲಿ, ಭವಿಷ್ಯದ ಮೂರನೇ ಮಹಾಯುದ್ಧವಿರಲಿ ಇದರಿಂದ ಹಿಂದೂ ನಿಷ್ಠರಿಗೆ ಅನುಕೂಲಕರವಾಗಲಿದೆ: ಪಿಂಗಳೆ


ಮಂಗಳೂರು: ಕೊರೊನಾದ ಮಹಾಮಾರಿಯಾಗಿರಲಿ ಅಥವಾ ಭವಿಷ್ಯದಲ್ಲಿ ಎದುರಾಗುವ ಮೂರನೇ ವಿಶ್ವಯುದ್ಧವಾಗಿರಲಿ, ಕಾಲಮಹಾತ್ಮೆಗನುಸಾರ ಮುಂಬರುವ ಕಾಲವು ಹಿಂದುತ್ವನಿಷ್ಠರಿಗೆ ಅನುಕೂಲಕರ ಕಾಲವಾಗಿರಲಿದೆ. ಅದಕ್ಕಾಗಿ ನಾವು ನಿರಂತರವಾಗಿ ಹಿಂದೂ ರಾಷ್ಟ್ರದ ಬೇಡಿಕೆಯನ್ನು ಮಾಡುತ್ತಿರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು (ಡಾ.) ಚಾರುದತ್ತ ಪಿಂಗಳೆ
ಅವರು 9 ನೇ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ'ಯನ್ನು ದೀಪ ಪ್ರಜ್ವಲಿಸಿ ಉದ್ಘಾಟನೆಯ ವೇಳೆ ಮಾತನಾಡುತ್ತಿದ್ದರು.

ಕೊರೊನಾ ಮಹಾಮಾರಿಯ ಕಾಲದಲ್ಲಿ ತಬ್ಲಿಗಿ ಜಮಾತವುಕೊರೊನಾ ವಾಹಕ’ದ ಪಾತ್ರ ನಿರ್ವಹಿಸಿದರೆ, ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಕೊರೊನಾ ಯೋಧ'ರ ಪಾತ್ರವನ್ನು ನಿರ್ವಹಿಸಿದವು. ಪ್ರಸಕ್ತ ಕಾಲದಲ್ಲಿ ರಾಜಕಾರಣ, ಶಿಕ್ಷಣಕ್ಷೇತ್ರ, ಪ್ರಸಾರ ಮಾಧ್ಯಮಗಳು, ಕಲಾಕ್ಷೇತ್ರ ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿದೇಶಭಕ್ತ ಹಾಗೂ ಧರ್ಮಪ್ರೇಮಿ’ಗಳ ವಿರುದ್ಧ ದೇಶದ್ರೋಹಿ ಹಾಗೂ ಧರ್ಮವಿರೋಧಿ' ಹೀಗೆ ಧ್ರುವೀಕರಣ ಆಗುತ್ತಿದೆ. ಈ ವೈಚಾರಿಕ ಧ್ರುವೀಕರಣದ ಕಾಲದಲ್ಲಿ ಧರ್ಮದ ಪರವಾಗಿ ಹಿಂದೂ ರಾಷ್ಟ್ರದ ದಿಕ್ಕಿನತ್ತ ಮಾರ್ಗಕ್ರಮಣ ಮಾಡಿರಿ, ಎಂದು ಪಿಂಗಳೆಯವರು ಕರೆ ನೀಡಿದ್ದಾರೆ. ಜಾತ್ಯತೀತ ಹಾಗೂ ವಿದೇಶಿ ಜನರ ಕೆಟ್ಟ ದೃಷ್ಟಿಯಿಂದ ನೇಪಾಳವನ್ನು ಹಿಂದೂ ರಾಷ್ಟ್ರ'ವೆಂದು ಘೋಷಿಸಲು ಅಡಚಣೆಗಳು ನಿರ್ಮಾಣವಾಗುತ್ತಿವೆ. ನೇಪಾಳದ ಈಗಿನ ಸರಕಾರವು ಹಿಂದೂದ್ರೋಹಿಯಾಗಿದೆ. ನೇಪಾಳ ಹಾಗೂ ಭಾರತ ಇವರೆಡು ರಾಷ್ಟ್ರಗಳನ್ನುಹಿಂದೂ ರಾಷ್ಟ್ರ’ವನ್ನಾಗಿಸಲು ಜಗತ್ತಿನಾದ್ಯಂತ ಹಿಂದೂಗಳು ಸಂಘಟಿತರಾಗಬೇಕು ಎಂದು ರಾಷ್ಟ್ರೀಯ ಧರ್ಮಸಭಾ ನೇಪಾಳದ ಅಧ್ಯಕ್ಷ ಡಾ. ಮಾಧವ ಭಟ್ಟರಾಯಿ ಇವರು ಹೇಳಿದರು.


ಬಾಲಿ (ಇಂಡೋನೇಷಿಯಾ)ದಿಂದ ಆನ್‍ಲೈನ್ ಮೂಲಕ ಜೋಡಿಸಲ್ಪಟ್ಟಿದ್ದ ಹಾಗೂ ಇಂಟರನ್ಯಾಶನಲ್ ಡಿವೈನ್ ಲವ್ ಸೊಸೈಟಿಯ ಅಧ್ಯಕ್ಷ, ವಲ್ರ್ಡ್ ಹಿಂದೂ ಫೆಡರೇಶನ್' ಇದರ ಉಪಾಧ್ಯಕ್ಷರಾದ ಧರ್ಮಯೆಶಾಜಿ ಇವರು,ನಾವು ನಮ್ಮ ಕುಟುಂಬದವರನ್ನು ರಕ್ಷಿಸುವಂತೆಯೇ ನಮ್ಮ ಧರ್ಮದ ರಕ್ಷಣೆಯನ್ನು ಮಾಡಬೇಕು ಎಂದು ಹೇಳಿದರು. ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರಾಷ್ಟ್ರಘಾತಕ ಶಕ್ತಿಗಳಿಗೆ ಹಿಂದೂ ರಾಷ್ಟ್ರವೇ ಉತ್ತರವಾಗಿದೆ’ ಎಂದು ಹೇಳಿದರು.


ಅಧಿವೇಶನದ ಆರಂಭದಲ್ಲಿ ಶಂಖನಾದ, ವೇದಮಂತ್ರಗಳ ಪಠಿಸಲಾಯಿತು. ಸನಾತನದ ಧರ್ಮಪ್ರಚಾರಕರಾದ ಸದ್ಗುರು ಸತ್ಯವಾನ ಕದಮರು ಹಿಂದೂ ಜನಜಾಗೃತಿ ಸಮಿತಿಯ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರ ಆಶೀರ್ವಾದ ರೂಪಿ ಸಂದೇಶವನ್ನು ಓದಿದರು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ ರಾಜಹಂಸ ಅಧಿವೇಶನದ ಉದ್ದೇಶವನ್ನು ಹೇಳಿದರೆ, ಅದರ ನಿರೂಪಣೆಯನ್ನು ಸುಮಿತ ಸಾಗವೇಕರ ಮಾಡಿದರು.

Leave a Reply

Your email address will not be published. Required fields are marked *