ಕುಂದಾಪುರ: 163 ಬಾರಿ ಕ್ವಾರಂಟೈನ್ ನಿಯಮ ಉಲ್ಲಂಘಿಸಿದಾತನಿಗೆ ಬಿತ್ತು ಕೇಸ್!

ಮಲ್ಪೆ: ಒಂದಲ್ಲ, ಎರಡಲ್ಲ ಬರೋಬ್ಬರಿ 163 ಬಾರಿ ಹೋಂ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿ ಊರೂರು ಸುತ್ತಾಡಿದ ಕುಂದಾಪುರ ಕೋಟೇಶ್ವರ ನಿವಾಸಿ ವ್ಯಕ್ತಿ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತ ಕ್ವಾರಂಟೈನ್ ಆಗಿರುವಾಗಲೇ ಕುಂದಾಪುರ, ಉಡುಪಿ ಮತ್ತಿತರ ಕಡೆ ಓಡಾಡಿದ್ದು ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪ ಹೊತ್ತಿದ್ದಾನೆ. ಸಹಬ್ ಸಿಂಗ್ ಪ್ರಕರಣದ ಆರೋಪಿ.
ಈತ ಮುಂಬೈಯಿಂದ ಬಂದು 14 ದಿನಗಳ ಕಾಲ ಹೋಮ್ ಕ್ವಾರಂಟೇನ್ ಆಗಿದ್ದರೂ ಈ ವೇಳೆ 163 ಬಾರಿ ನಿಯಮ ಉಲ್ಲಂಘಿಸಿ ಹೊರಗಡೆ ತಿರುಗಾಡಿದ್ದಾನೆ. ಕಳೆದ ಜೂ.29ರಂದು ಕುಂದಾಪುರಕ್ಕೆ ಆಗಮಿಸಿದ್ದ ಸಹಬ್ ಸಿಂಗ್ ಬೈಪಾಸ್ ಬಳಿಯ ವಾಸ್ತವ್ಯವಿದ್ದ ಬಾಡಿಗೆ ಮನೆಯಲ್ಲಿ ಹೋಮ್ ಕ್ವಾರಂಟೈನ್ ಆಗಿದರ್ದ. ಜು.13ಕ್ಕೆ ಕ್ವಾರಂಟೈನ್ ಅವಧಿ ಮುಗಿಯಲಿದ್ದು ಆದರೆ ಅದಕ್ಕೂ ಮೊದಲೇ ಬೇಕಾಬಿಟ್ಟಿ ತಿರುಗಾಡಿರುವುದನ್ನು ಜಿಪಿಎಸ್ ಆಧಾರದಲ್ಲಿ ಪತ್ತೆಮಾಡಲಾಗಿದೆ. ಫ್ಲೈಯಿಂಗ್ ಸ್ವ್ಕಾಡ್ ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.