ಕುಂದಾಪುರ: ಬೈಕ್ ಡಿಕ್ಕಿ, ಪಾದಾಚಾರಿ ಸಾವು

ಕುಂದಾಪುರ: ರಸ್ತೆ ದಾಟುತ್ತಿದ್ದ ಪಾದಾಚಾರಿಯೋರ್ವರಿಗೆ ಬೈಕ್ ಡಿಕ್ಕಿಯಾಗಿ ಸಾವನ್ನಪ್ಪಿದ ಘಟನೆ ಶಿರೂರು ಪೇಟೆಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಜರಗಿದೆ. ಸಾವಿಗೀಡಾದವರನ್ನು ಇಕ್ಬಾಲ್(59) ಎಂದು ಗುರ್ತಿಸಲಾಗಿದ್ದು, ಮೂಲತಃ ಕುಂದಾಪುರದ ಕಂಡ್ಲೂರಿನವರಾದ ಇವರು ಕೆಲವು ವರ್ಷಗಳಿಂದ ತನ್ನ ಪತ್ನಿಯ ಊರಾದ ಶೀರೂರಿ ನಲ್ಲಿ ನೆಲೆಸಿದ್ದಾರೆನ್ನಲಾಗಿದೆ.ಮನೆಯಿಂದ ಪೇಟೆಗೆ ಬಂದ ಇವರು ಹೆದ್ದಾರಿ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿತ್ತು. ತೀವ್ರವಾಗಿ ಗಾಯಗೊಂಡಿದ್ದ ಇವರನ್ನು ಕುಂದಾಪುರದ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಿ ಮಣಿಪಾಲಕ್ಕೆ ಕೊಂಡೊಯ್ಯಲಾಗಿದ್ದರೂ,ಫಲಕಾರಿಯಾಗದೇ ಸಾವಿಗೀಡಾಗಿದ್ದಾರೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.