ಕುಂದಾಪುರ: “ಕೊರೋನಾ” ಭೀತಿ, ಹೋಂ ಕ್ವಾ ರಂಟೈನ್ ನಲ್ಲೇ ವಿದ್ಯಾರ್ಥಿ ಸುಸೈಡ್!

ಕುಂದಾಪುರ: ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿದ್ದ 10ನೇ ತರಗತಿಯ ವಿದ್ಯಾರ್ಥಿ ಕೊರೋನಾ ಭೀತಿಯಿಂದಾಗಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವರದಿಯಾಗಿದೆ.
ಮೃತ ವಿದ್ಯಾರ್ಥಿಯ ತಾಯಿ ಕೆಲಸ ಮಾಡುತ್ತಿದ್ದ ಮನೆಯಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿದ್ದ ಮನೆ ಮಾಲಿಕರಲ್ಲಿ ಕೊರೋನಾ ಪತ್ತೆಯಾಗಿತ್ತು. ಆ ಬಳಿಕ ಮೃತ ವಿದ್ಯಾರ್ಥಿ ಕಾರ್ತಿಕ್ ಮತ್ತು ಆತನ ತಾಯಿಯನ್ನು ಮನೆಯಲ್ಲೇ ಹೋಮ್ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಲಾಗಿತ್ತು.
ಕಾರ್ತಿಕ್ ಮತ್ತು ಆತನ ತಾಯಿ ಕಳೆದ ಏಳು ದಿನಗಳಿಂದ ಮನೆಯಲ್ಲೇ ಇದ್ದು ಈ ನಡುವೆ ಮನೆಯಿಂದ ಹೊರಬರಲಾಗದೆ ಕಾರ್ತಿಕ್ ಬಹಳ ನೊಂದಿದ್ದ. ಜೊತೆಗೆ ಕೋವಿಡ್ ಕುರಿತೂ ಭೀತಿಗೊಂಡಿದ್ದ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಕಾರ್ತಿಕ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

Leave a Reply

Your email address will not be published. Required fields are marked *