ಕುಂದಾಪುರ: ಕಾಣಿಕೆ ಡಬ್ಬಿ ದೋಚಿದ ಕಳ್ಳ ಸಿಸಿ ಕೆಮರಾದಲ್ಲಿ ಸೆರೆ

ಕುಂದಾಪುರ: ಕಟ್‍ಬೇಲ್ತೂರು ಶ್ರೀ ಭದ್ರಮಹಾಕಾಳಿ ದೈವಸ್ಥಾನಕ್ಕೆ ನುಗ್ಗಿದ ಕಳ್ಳ ಕಾಣಿಕೆ ಹುಂಡಿ ದೋಚಿದ ಘಟನೆ ಇಂದು ನಸುಕಿನ ಜಾವ ನಡೆದಿದ್ದು ಕಳ್ಳನ ಕೈಚಳಕ ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ನಸುಕಿನ ಜಾವ 3ರಿಂದ 4 ಗಂಟೆಯ ಅವಧಿಯಲ್ಲಿ ದೈವಸ್ಥಾನದ ಬಾಗಿಲು ಒಡೆದು ಒಳನುಗ್ಗಿ ಕಾಣಿಕೆ ಹುಂಡಿಯನ್ನು ಒಡೆದು ಅಂದಾಜು 5-6 ಸಾವಿರ ರೂಪಾಯಿ ದೋಚಿದ್ದಾನೆ. ಕಳ್ಳನ ಕರಾಮತ್ತು ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *