ಕಿರುಕುಳ ನೀಡಿದವರ ಮನೆಯಲ್ಲೇ ಯುವಕ ಆತ್ಮಹತ್ಯೆ!

ಶಂಕರನಾರಾಯಣ: ತನಗೆ ನೀಡಿದ್ದ ಕಿರುಕುಳವನ್ನು ಸಹಿಸದ ಯುವಕನೋರ್ವ ಆರೋಪಿಗಳ ಮನೆಯಲ್ಲೇ ನೇಣಿಗೆ ಶರಣಾದ ಘಟನೆ ಶಂಕರನಾರಾಯಣ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತನನ್ನು ಅಂಪಾರು ನಿವಾಸಿ ಕೀರ್ತಿ(27) ಎಂದು ಗುರುತಿಸಲಾಗಿದೆ.
ಆರೋಪಿಗಳಾದ ಅಂಪಾರಿನ ಗಿರಿಜಾ ಪೂಜಾರಿ, ಮಮತಾ ಪೂಜಾರಿ, ಉಮೇಶ ಪೂಜಾರಿ ಎಂಬವರ ಮನೆಯ ಪಕ್ಕದಲ್ಲಿ ಕೀರ್ತಿ ಅಂಗಡಿ ವ್ಯಾಪಾರ ಮಾಡಿಕೊಂಡಿದ್ದು ಆರೋಪಿಗಳು ನಾನಾ ರೀತಿಯಲ್ಲಿ ಮಾನಸಿಕ ಹಿಂಸೆ ಮತ್ತು ಕಿರುಕುಳ ನೀಡುತ್ತಿದ್ದರು. ಇದನ್ನು ತಾಳಲಾರದೆ ಕೀರ್ತಿ ಆರೋಪಿಗಳ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಸೋದರಿ ಲಲಿತಾ ಪೆÇಲೀಸರಿಗೆ ದೂರು ನೀಡಿದ್ದಾರೆ.
ಆರೋಪಿಗಳು ಬೆಂಗಳೂರಿನಲ್ಲಿರುವ ಲಲಿತಾ ಅವರಿಗೆ ಕರೆ ಮಾಡಿ ಕೀರ್ತಿಗೆ ಹೃದಯಘಾತವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದೇವೆ ಎಂದು ಹೇಳಿದ್ದರು. ನಂತರ ನಸುಕಿನ ಜಾವ 4:30ಕ್ಕೆ ಮತ್ತೆ ಕರೆ ಮಾಡಿದ್ದು ಕೀರ್ತಿ ಹೃದಯಘಾತದಿಂದ ತೀರಿ ಹೋಗಿದ್ದಾನೆ ಎಂದು ಹೇಳಿದ್ದಾಗಿ ದೂರಲ್ಲಿ ವಿವರಿಸಲಾಗಿದೆ. ಶಂಕರನಾರಾಯಣ ಠಾಣಾ ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ.