ಕಾರ್ಕಳ: 10 ತಿಂಗಳ ಮಗು ನಿಗೂಢ ಸಾವು!

ಕಾರ್ಕಳ: ಇಲ್ಲಿಗೆ ಸಮೀಪದ ಮಿಯಾರು ಬಳಿಯ ಕುಂಟಿಬೈಲು ಎಂಬಲ್ಲಿ ಉತ್ತರ ಕನ್ನಡ ಕುಟುಂಬವೊಂದರ 10 ತಿಂಗಳ ಮಗು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಇಂದು ಬೆಳಕಿಗೆ ಬಂದಿದೆ.
ಬಿಜಾಪುರದ ಮುದ್ದೆಬಿಹಾಳದದಿಂದ ಕಳೆದ 10 ದಿನಗಳ ಹಿಂದೆ ಕುಟುಂಬ ಕುಂಟಿಬೈಲಿಗೆ ಆಗಮಿಸಿತ್ತು. ಮಗುವಿಗೆ ಜ್ವರ ಬಂದಿರುವ ಕಾರಣದಿಂದ ಕಾರ್ಕಳ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಇವತ್ತು ಮಧ್ಯಾಹ್ನ ನಿಗೂಢ ರೀತಿಯಲ್ಲಿ ಮೃತಪಟ್ಟಿರುವ ಮಾಹಿತಿ ಲಭಿಸಿದ್ದು ಸಾವಿನ ಹಿನ್ನೆಲೆ ಇನ್ನಷ್ಟೇ ತಿಳಿದುಬರಬೇಕಿದೆ.

Leave a Reply

Your email address will not be published. Required fields are marked *