ಕಾಂಗ್ರೆಸ್‍ನಿಂದ ಸಚಿನ್ ಪೈಲಟ್ ಉಚ್ಛಾಟನೆ

ಜೈಪುರ: ಕಾಂಗ್ರೆಸ್ ವಿರುದ್ಧ ಬಂಡಾಯ ಸಾರಿರುವ ಸಚಿನ್ ಪೈಲಟ್‍ರನ್ನು ಕಾಂಗ್ರೆಸ್ ನಿನ್ನೆ ಪಕ್ಷದಿಂದ ಉಚ್ಛಾಟಿಸಿದೆ. ನಿನ್ನೆ ಜೈಪುರದಲ್ಲಿ ನಡೆದ ಎರಡನೇ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗದ ಹಿನ್ನೆಲೆ ಸಚಿನ್ ಪೈಲೈಟ್ ಅವರನ್ನು ಡಿಸಿಎಂ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದೆ. ಉಚ್ಛಾಟನೆಗೊಂಡಿರುವ ಸಚಿನ್ ಪೈಲಟ್ ಮೊದಲ ಪ್ರತಿಕ್ರಿಯೆಯನ್ನು ಟ್ವೀಟ್ ಮೂಲಕ ನೀಡಿದ್ದು, ಸತ್ಯವನ್ನು ಸಂಕಷ್ಟದಲ್ಲಿ ಸಿಲುಕಿಸಬಹುದೇ ವಿನಹ ಸೋಲಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅತ್ತ ಸಚಿನ್ ಪೈಲಟ್ ಬೆಂಬಲಕ್ಕೆ ನಿಂತಿದ್ದ ಸಚಿವರಾದ ವಿಶ್ವೇಂದ್ರ ಸಿಂಗ್ ಮತ್ತು ರಮೇಶ್ ಮೀನಾ ಅವರನ್ನೂ ಅವರ ಹುದ್ದೆಗಳಿಂದ ತೆಗೆದುಹಾಕಲಾಗಿದೆ. ಅಲ್ಲದೆ ರಾಜಸ್ಥಾನದ ಕೈ ಸರ್ಕಾರದ ವಿರುದ್ಧ ಬಂಡಾಯ ಸಾರಿದ್ದ ಡಿಸಿಎಂ ಸಚಿನ್ ಪೈಲಟ್ ತಲೆ ದಂಡವಾಗಿರುವ ಜೊತೆಗೆ ಪೈಲಟ್‍ನ ಟೀಂ ನ 17 ಮಂದಿ ಸದಸ್ಯರಿಗೆ ಆತಂಕ ಶುರುವಾಗಿದೆ. ಇಂದಿನ ಶಾಸಕಾಂಗ ಸಭೆಯಲ್ಲಿ 109 ಶಾಸಕರು ಒಮ್ಮತ ನಿರ್ಧಾರದ ಮೂಲಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದ ಭಾಗವಾಗಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಕ್ಕೆ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲ್ ಸಭೆಯ ಬಳಿಕ ತಿಳಿಸಿದ್ದಾರೆ. ರಾಜಸ್ಥಾನ ರಾಜಕೀಯದಲ್ಲಿ ನಿನ್ನೆಯಿಂದ ಹೈಡ್ರಾಮ ನಡೆಯುತ್ತಿದೆ. 30 ಶಾಸಕರೊಂದಿಗೆ ಸಚಿನ್ ಪೈಲೈಟ್ ದೆಹಲಿ ಬಳಿ ಇರುವ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಈ ಪೈಕಿ 13 ಮಂದಿ ರಾಜಸ್ಥಾನಕ್ಕೆ ವಾಪಸ್ ಆಗಿದ್ದರು. ಬಾಕಿ ಉಳಿದ ಸದಸ್ಯರು ಮೊನ್ನೆ ನಡೆದ ಶಾಸಕಾಂಗ ಸಭೆಯಲ್ಲಿ ಭಾಗಿಯಾಗುವಂತೆ ಹೈಕಮಾಂಡ್ ಸೂಚಿಸಿತ್ತು. ಅಲ್ಲದೆ ನಿನ್ನೆ ಬೆಳಗ್ಗೆ ಕೂಡಾ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಅಹ್ಮದ್ ಪಟೇಲ್, ಪಿ ಚಿದಂಬರಂ, ಕೆ.ಸಿ ವೇಣುಗೋಪಾಲ್ ಸೇರಿದಂತೆ ಹಲವು ನಾಯಕರು ಪೈಲಟ್ ಗೆ ದೂರವಾಣಿ ಮೂಲಕ ಸಂಪರ್ಕಿಸಿದ್ದರು. ಸಚಿನ್ ಪೈಲೈಟ್ ಯಾರ ಮಾತಿಗೂ ಬೆಲೆ ನೀಡಿರಲಿಲ್ಲ. ಸಿಎಂ ಅಶೋಕ್ ಗೆಹ್ಲೋಟ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ತಮ್ಮನ್ನು ಸಿಎಂ ಮಾಡಬೇಕು ಮತ್ತು ರಾಜ್ಯ ಉಸ್ತುವಾರಿಯನ್ನು ಬದಲಿಸುವಂತೆ ಡಿಮ್ಯಾಂಡ್ ಇಟ್ಟಿದ್ದರು. ಅಂತಿಮ ಹೈಕಮಾಂಡ್ ಶಾಸಕರ ಸಮ್ಮಿತಿ ಮೇರೆಗೆ ಎರಡನೇ ಶಾಸಕಾಂಗ ಸಭೆ ಬಳಿಕ ಈ ಮಹತ್ವ ನಿರ್ಧಾರ ತೆಗೆದುಕೊಂಡಿದೆ.

Leave a Reply

Your email address will not be published. Required fields are marked *