ಕಾಂಗ್ರೆಸ್‌ಗೆ ಹೊಸ ಯುವ ಭರವಸೆ ವಿವೇಕ್‌ರಾಜ್

ಮಂಗಳೂರು: ಒಂದು ಕಡೆ ಜ್ಯೋತಿರಾದಿತ್ಯ ಸಿಂಧಿಯಾ ಮತ್ತೊಂದು ಕಡೆ ಸಚಿನ್ ಪೈಲಟ್ ಮುಂತಾದ ನಾಯಕರು ಕಾಂಗ್ರೆಸ್‌ನಿಂದ ದೂರವಾಗಿದ್ದಾರೆ.

ಪಕ್ಷದಲ್ಲಿ ಯುವಕರಿಗೆ ಆದ್ಯತೆ ಇಲ್ಲ ಎಂಬ ಆರೋಪ ದೀರ್ಘ ಕಾಲದಿಂದ ಕೇಳಿ ಬರುತ್ತಲೇ ಇದೆ. ಆದ್ದರಿಂದಲೇ ಯುವಕರು ಪಕ್ಷದಿಂದ ದೂರವಿದ್ದಾರೆ ಎಂಬ ಮಾತೂ ಇದೆ.

ಇಂಥ ಸಂದರ್ಭದಲ್ಲಿ ಮಂಗಳೂರಿನಲ್ಲಿ ಪಕ್ಷಕ್ಕಾಗಿ ದುಡಿಯುವ ಯುವ ನಾಯಕರೊಬ್ಬರು ಹೊಸ ಭರವಸೆ ಮೂಡಿಸುತ್ತಿದ್ದಾರೆ. ಅವರೇ ವಿವೇಕ್‌ರಾಜ್.

ಪನಾಮಾ ಗ್ರೂಪ್‌ನ ಯುವ ಉದ್ಯಮಿಯಾಗಿರುವ ವಿವೇಕ್‌ರಾಜ್ ಕೃಷಿಯಲ್ಲೂ ಆಸಕ್ತಿ ಹೊಂದಿದವರು. ಪ್ರಸ್ತುತ ಕೃಷಿ ಕಡೆಗೆ ಹೆಚ್ಚಿನ ಒಲವು ತೋರಿಸುತ್ತಿದ್ದಾರೆ. ಸಮಾಜಸೇವೆ ಎಂಬುದು ಅವರ ಜೀವಾಳ. ಉತ್ತಮ ವಾಗ್ಮಿ, ಸಂಘಟಕನೂ ಆಗಿರುವ ಇವರಿಗೆ ರಾಜಕೀಯದಲ್ಲೂ ಆಸಕ್ತಿ. ಅದು ಹುದ್ದೆಗಾಗಿ ಅಲ್ಲ , ಸಮಾಜಸೇವೆಗಾಗಿ.

ಇಂಥ ವಿವೇಕ್‌ರಾಜ್ ಕಾಂಗ್ರೆಸ್ ಕಾರ್ಯಕರ್ತರಾಗಿದ್ದುಕೊಂಡೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಷ್ಟ್ರೀಯ ನಾಯಕರಾಗಿರುವ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮುಂತಾದವರ ಗಮನ ಸೆಳೆದು ಅವರ ಆತ್ಮೀಯತೆಗೆ ಪಾತ್ರರಾದವರು.

ವಿವೇಕ್‌ರಾಜ್ ಬಗ್ಗೆ ಡಿಕೆಶಿ, ರಾಹುಲ್ ಗಾಂಧಿಗೆ ಭಾರೀ ನಿರೀಕ್ಷೆಯಿದೆ. ಇಂಥ ಯುವ ನಾಯಕರಿಂದಲೇ ಪಕ್ಷವನ್ನು ಮತ್ತೆ ಗಟ್ಟಿಯಾಗಿ ಕಟ್ಟಲು ಸಾಧ್ಯ ಎಂದು ಅವರು ಹೇಳುತ್ತಿದ್ದಾರೆ. ಈ ಬಾರಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಇಂಥ ಯುವ ನಾಯಕರ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದಾರೆ ಪಕ್ಷ ಸಂಘಟನೆಗೆ ಉತ್ಸಾಹಿ ಹಾಗೂ ಸಮಾಜಸೇವೆಯ ತುಡಿತವುಳ್ಳ ವಿವೇಕ್‌ರಾಜ್‌ರಂಥವರು ಬೇಕು ಎಂಬುದು ಡಿಕೆಶಿ ಭಾವನೆ.

ಆ ನಿಟ್ಟಿನಲ್ಲಿ ಡಿಕೆಶಿ ಈಗಾಗಲೇ ಕಾರ್ಯಪ್ರವೃತ್ತರಾಗಿರುವುದು ಕಾಂಗ್ರೆಸ್ಸಿನ ಹೊಸ ಆಶಾಕಿರಣವಾಗಿದೆ. ನಿಜವಾಗಿಯೂ ವಿವೇಕ್‌ರಾಜ್‌ರಂಥವರು ಕಾಂಗ್ರೆಸ್ಸಿಗೆ ಬೇಕಾಗಿರುವ ಇಂಥ ಎಷ್ಟೋ ಮಂದಿ ಇದ್ದಾರೆ.

ಆದರೆ ಅವರಿಗೆ ಪಕ್ಷದಲ್ಲಿ ಸರಿಯಾದ ಅಧಿಕಾರ, ಜವಾಬ್ದಾರಿ ಸಿಗದೆ ತಮ್ಮಲ್ಲಿರುವ ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಳ್ಳಲಾಗದೆ ಪರದಾಡುತ್ತಿದ್ದಾರೆ. ಡಿಕೆಶಿ ಕಾಲದಲ್ಲಾದರೂ ಇಂಥ ಯುವಕರನ್ನು ಹುಡುಕಿ ಬೆಳೆಸುವ ಕೆಲಸ ಆಗಬೇಕಾಗಿದೆ.

Leave a Reply

Your email address will not be published. Required fields are marked *