ಕಲ್ಲಡ್ಕ: ಎಲೆಕ್ಟ್ರಾನಿಕ್ ವಸ್ತುಗಳ ಗೋದಾಮಿಗೆ ಬೆಂಕಿ

ಮಂಗಳೂರು: ಎಲೆಕ್ಟ್ರಾನಿಕ್ ವಸ್ತಗಳ ಗೋದಾಮಿಗೆ ಅಕಸ್ಮಿಕವಾಗಿ ಬೆಂಕಿ ತಗಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಕಲ್ಲಡ್ಕದಲ್ಲಿ ಇಂದು ಸಂಜೆ ನಡೆದಿದೆ. ಕಲ್ಲಡ್ಕದ ಫಿದಾ ಎಂಟರ್ ಪ್ರೈಸಸ್ ವಾಣಿಜ್ಯ ಸಂಕೀರ್ಣದಲ್ಲಿ ವಿದ್ಯುತ್ ಸಲಕರಣೆಗಳನ್ನು ದಾಸ್ತಾನಿರಿಸಲಾಗಿದ್ದು ಇದಕ್ಕೆ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಘಟನೆಯಲ್ಲಿ ಅಂದಾಜು 15 ಲಕ್ಷ ರೂ. ನಷ್ಟ ಸಂಭವಿಸಿದೆ. ಬಂಟ್ವಾಳ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

Leave a Reply

Your email address will not be published. Required fields are marked *