ಕಟೀಲು: ಭಾರೀ ಮಳೆಗೆ ಹೆದ್ದಾರಿ ಗುಡ್ಡ ಕುಸಿತ

ಕಟೀಲು: ಗುರುವಾರ ರಾತ್ರಿಯಿಂದ ಎಡೆಬಿಡದೆ ಸುರಿದ ಭಾರಿ ಮಳೆಗೆ ಕಟೀಲು ಬಜಪೆ ರಾಜ್ಯ ಹೆದ್ದಾರಿಯ ಕಟೀಲು ಸೇತುವೆ ಸಮೀಪದ ದೇವರಗುಡ್ಡೆ ರಸ್ತೆ ಬಳಿಯ ತಿರುವಿನಲ್ಲಿ ಗುಡ್ಡ ಕುಸಿದು ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಬೃಹತ್ ಆಕಾರದ ಬಂಡೆಕಲ್ಲು ಸಹಿತ ಮಣ್ಣು ಮುಖ್ಯರಸ್ತೆ ಬದಿಗೆ ಬಿದ್ದಿದೆ. ಕಟೀಲು ಬ್ರಹ್ಮಕಲಶೋತ್ಸವ ಸಂದರ್ಭ ರಾಜ್ಯ ಹೆದ್ದಾರಿಯ ಅಗಲೀಕರಣದ ಸಂದರ್ಭದಲ್ಲಿ ರಸ್ತೆಯ ಬದಿಗಳಲ್ಲಿನ ಗುಡ್ಡಗಳನ್ನು ಅಗೆದು ತಿರುವಿನಿಂದ ಕೂಡಿದ ರಸ್ತೆಯನ್ನು ನೇರ ರಸ್ತೆಗಳನ್ನಾಗಿ ಮಾಡಲಾಗಿತ್ತು.

Leave a Reply

Your email address will not be published. Required fields are marked *