ಕಂಗನಾ ಬೆಂಬಲಕ್ಕೆ ನಿಂತ ತಿವಾರಿ

ಮುಂಬೈ: ಬಾಲಿವುಡ್‍ನಲ್ಲಿ ಸದ್ಯ ಸ್ವಜನಪಕ್ಷಪಾತದ ಕುರಿತು ಭಾರೀ ಚರ್ಚೆ ನಡೆಯುತ್ತಿದೆ. ನಟಿ ಕಂಗನಾ ರಣಾವತ್ ಬಾಲಿವುಡ್‍ನ ಕೆಲ ಗಣ್ಯರ ಮೇಲೆ ಟೀಕೆಗಳನ್ನು ಮಾಡಿದ್ದು, ಇದಕ್ಕೆ ಟೀಂ ಇಂಡಿಯಾ ಕ್ರಿಕೆಟಿಗ ಮನೋಜ್ ತಿವಾರಿ ಬೆಂಬಲ ನೀಡಿ ಟ್ವೀಟ್ ಮಾಡಿದ್ದಾರೆ. ಆದರೆ ಕೆಲ ಬಾಲಿವುಡ್ ಸೆಲೆಬ್ರಿಟಿಗಳು ಕಂಗನಾ ಮಾಡಿದ ಆರೋಪಗಳನ್ನು ತಿರಸ್ಕರಿಸಿದ್ದು, ಪ್ರತ್ಯಾರೋಪಗಳನ್ನು ಮಾಡಿದ್ದಾರೆ.
ಸುಶಾಂತ್ ಸಿಂಗ್ ಸಾವಿಗೆ ಬಾಲಿವುಡ್‍ನಲ್ಲಿರುವ ನೆಪೆÇೀಟಿಸಂ (ಸ್ವಜನಪಕ್ಷಪಾತ) ಕಾರಣ ಎಂದು ರಂಗನಾ ಆರೋಪಿಸಿದ್ದರು. ಇದಕ್ಕೆ ಬಾಲಿವುಡ್‍ನ ಹಲವರು ಬೆಂಬಲ ನೀಡಿದ್ದರೆ ಇನ್ನೂ ಕೆಲವರು ಟೀಕೆ ಮಾಡಿದ್ದರು. ಸದ್ಯ ಈ ಕುರಿತು ಟ್ವೀಟ್ ಮಾಡಿರುವ ಮನೋಜ್ ತಿವಾರಿ, ಸುಶಾಂತ್ ಸಿಂಗ್ ಸಾವಿನ ಕುರಿತು ಕಂಗನಾ ಮಾಡಿರುವ ಆರೋಪಗಳನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಎಲ್ಲರೂ ಒಂದು ವಿಚಾರ ನೆನಪಿನಲ್ಲಿಟ್ಟಿಕೊಳ್ಳಬೇಕು. ನಾವು ಮಾಡಿದ ಕರ್ಮ ಎಂದಿಗಾದರೂ ವಾಪಸ್ ಬರುತ್ತದೆ, ಇಂಡಿಯಾ ವಾಂಟ್ ಸುಶಾಂತ್ ಟ್ರುಥ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಮನೋಜ್ ತಿವಾರಿ, ಟೀಕೆ ಮಾಡುವವರ ವಿರುದ್ಧ ಆಕೆ ಹೋರಾಟ ಮಾಡುತ್ತಾರೆ. ಬೇರೆ ವಿಚಾರಗಳ ಬಗ್ಗೆ ಕಂಗನಾ ತಲೆಕೆಡಿಸಿಕೊಳ್ಳದೆ ಹೋರಾಟವನ್ನು ಮುಂದುವರಿಸಬೇಕಿದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮುನ್ನ ಸುಶಾಂತ್ ಸಿಂಗ್ ಫೆÇೀಟೋ ಶೇರ್ ಮಾಡಿದ್ದ ಮನೋಜ್ ತಿವಾರಿ, ಕೊನೆಗೆ ಶತ್ರುಗಳ ಮಾತುಗಳನ್ನು ಅಲ್ಲ, ಸ್ನೇಹಿತರ ನಿಶಬ್ದವನ್ನು ನೆನಪಿಟ್ಟುಕೊಳ್ಳುತ್ತೇವೆ ಎಂದು ಮಾರ್ಟಿನ್ ಲೂಥರ್ ಕಿಂಗ್ ಹೇಳಿದ್ದ ಮಾತನ್ನು ಬರೆದುಕೊಂಡಿದ್ದರು. ಸುದ್ದಿ ವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ, ಬಾಲಿವುಡ್ ಸ್ಟಾರ್ ನಟ, ನಿರ್ಮಾಪಕರ ಹೆಸರನ್ನು ಉಲ್ಲೇಖಿಸಿ ಸಿನಿಮಾ ಮಾಫಿಯಾ ಬಗ್ಗೆ ಪ್ರಸ್ತಾಪ ಮಾಡಿದ್ದರು. ಅಲ್ಲದೇ ಸುಶಾಂತ್ ಸಿಂಗ್ ಸಾವಿಗೆ ಮೂವಿ ಮಾಫಿಯಾ ಕಾರಣ ಎಂದು ಆರೋಪಿಸಿದ್ದರು.

Leave a Reply

Your email address will not be published. Required fields are marked *