ಏನೆಕಲ್ಲು ದೇವರ ಕೆರೆಯ ಮೀನು ಹಿಡಿದ ನಾಲ್ವರ ಸೆರೆ

ಮಂಗಳೂರು: ಕಡಬ ತಾಲೂಕಿನ ಏನೆಕಲ್ಲು ದೇವರ ಗುಂಡಿಯಲ್ಲಿ ಮೀನು ಹಿಡಿದ ಸವಣೂರು ಗ್ರಾ.ಪಂ. ಸದಸ್ಯನೂ ಸೇರಿದಂತೆ ನಾಲ್ವರನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ತಡರಾತ್ರಿ ನಡೆದಿದೆ.
ಫೋರ್ಡ್ ಎಂಡೀವರ್ ವಾಹನದಲ್ಲಿ ಬಂದು ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಆರೋಪಿಗಳು ದೇವರಗುಂಡಿಯಲ್ಲಿ ಮೀನು ಹಿಡಿಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಸ್ಥಳೀಯರು ದಾಳಿ ನಡೆಸಿದ್ದಾರೆ. ಬಂಧಿತರನ್ನು ಸವಣೂರು ನಿವಾಸಿಗಳಾದ ಬಶೀರ್, ಅಬ್ದುಲ್ ರಝಾಕ್, ಬಶೀರ್ ಮತ್ತು ಅಬ್ದುಲ್ ಸಮದ್ ಎಂದು ಹೆಸರಿಸಲಾಗಿದೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರಲ್ಲಿ ಓರ್ವ ಸವಣೂರು ಗ್ರಾಮ ಪಂಚಾಯತ್ ಸದಸ್ಯನಾಗಿದ್ದಾನೆ ಎಂದು ತಿಳಿದುಬಂದಿದೆ. ದೇವರ ಗುಂಡಿಯಲ್ಲಿ ಕಳೆದ ಹಲವು ಸಮಯಗಳಿಂದ ರಾತ್ರಿ ದೇವರ ಮೀನುಗಳನ್ನು ಹಿಡಿಯಲಾಗುತ್ತಿದ್ದು ಈ ಬಗ್ಗೆ ಸ್ಥಳೀಯರು ಕಣ್ಣಿಟ್ಟಿದ್ದರು. ನಿನ್ನೆ ಕಾದು ಕುಳಿತು ದಾಳಿ ಸಂಘಟಿಸಿದ್ದಾರೆ.

Leave a Reply

Your email address will not be published. Required fields are marked *