ಎಕ್ಕಾರ್: ಮನೆಯಿಂದ ನಾಯಿ ಹೊತ್ತೊಯ್ದ ಚಿರತೆ ಸಿಸಿ ಕೆಮರಾದಲ್ಲಿ ಸೆರೆ!

ಬಜ್ಪೆ: ಕಟೀಲು ಸಮಿಪದ ಬಡಗ ಎಕ್ಕಾರು ಗ್ರಾಮದ ಅರಸುಲಪದವು ಎಂಬಲ್ಲಿನ ಮನೆಯಿಂದ ಚಿರತೆಯೊಂದು ನಾಯಿಯನ್ನು ಹೊತ್ತೊಯ್ದ ಘಟನೆ ನಡೆದಿದ್ದು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸಿಸಿ ಕೆಮರಾದಲ್ಲಿ ದೃಶ್ಯ ಸೆರೆಯಾಗಿದ್ದು ಇದೇ ಮನೆಯಿಂದ ಹಿಂದೆಯೂ ನಾಯಿಯನ್ನು ಚಿರತೆ ಹೊತ್ತೊಯ್ದಿತ್ತು ಎನ್ನಲಾಗಿದೆ.
ಬಡಗ ಎಕ್ಕಾರು ನಿವಾಸಿ ಸ್ಟ್ಯಾನಿ ಪಿಂಟೋ ಅವರ ಮನೆಯ ನಾಯಿ ಚಿರತೆಗೆ ಆಹಾರವಾಗಿದೆ. 6 ತಿಂಗಳ ಹಿಂದೆಯೂ ಇದೇ ಮನೆಯಿಂದ ನಾಯಿಯನ್ನು ಚಿರತೆ ಕೊಂಡೊಯ್ದಿತ್ತು.