ಉಳ್ಳಾಲ: ಐದು ಮಂದಿಗೆ ಕೊರೊನಾ

ಉಳ್ಳಾಲ: ಉಳ್ಳಾಲ ಕ್ಷೇತ್ರ ವ್ಯಾಪ್ತಿಯಲ್ಲಿ ಐದು ಮಂದಿಯಲ್ಲಿ ನಿನ್ನೆ ಕೊರೊನಾ ಪತ್ತೆಯಾಗಿದೆ. ಈ ಪೈಕಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಯಿ ಮಗಳು ಹಾಗೂ ಸಿಬ್ಬಂದಿ ಮತ್ತು ಇಬ್ಬರು ವಿದೇಶದಿಂದ ಬಂದವರಾಗಿದ್ದಾರೆ.
ಕುಂಪಲ ಚಿತ್ರಾಂಜಲಿನಗರದ 46ರ ತಾಯಿ ಮತ್ತು 12 ರ ಹರೆಯದ ಬಾಲಕಿ, ತೊಕ್ಕೊಟ್ಟು ಚರ್ಚ್ ಬಳಿಯ 40ರ ಮಹಿಳೆ, ವಿದೇಶದಿಂದ ಬಂದ ಕೊಣಾಜೆ ತಿಬ್ಲಪದವು 25ರ ಯುವಕ, ತಲಪಾಡಿಯ 27ರ ಹರೆಯದ ಮಹಿಳೆಗೆ ಕೊರೊನಾ ದೃಢವಾಗಿದೆ.
ಈ ಪೈಕಿ ಇಬ್ಬರು ನಗರದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಯಾಗಿದ್ದು, ಆಸ್ಪತ್ರೆಯಲ್ಲಿರುವ ವೈದ್ಯರಿಗೆ ಕೊರೊನಾ ಪತ್ತೆಯಾಗಿರುವುದರಿಂದ ಅವರ ಸಂಪರ್ಕದಿಂದ ಸಿಬ್ಬಂದಿಗೆ ಕೊರೊನಾ ತಗಲಿರುವ ಸಾಧ್ಯತೆ ಇದೆ.
ಈವರೆಗೆ ಉಳ್ಳಾಲ ಭಾಗದಲ್ಲಿ 50ಕ್ಕೂ ಅಧಿಕ ಮಂದಿಯಲ್ಲಿ ಕೊರೊನಾ ಪತ್ತೆಯಾಗಿದೆ. ಇದರಲ್ಲಿ ಉಳ್ಳಾಲ ಠಾಣೆಯ 12 ಸಿಬ್ಬಂದಿ, ನಾಲ್ವರು ಪೊಲೀಸ್ ಠಾಣೆಗೆ ಚಹಾ ತರುತ್ತಿದ್ದವರು, ಇಬ್ಬರು ಆರೋಪಿಗಳು ಸೇರಿದಂತೆ ಠಾಣೆಯ ಸಂಪರ್ಕದಲ್ಲಿದ್ದ ಓರ್ವ ಮಂಗಳೂರು ಗ್ರಾಮಾಂತರ ಠಾಣೆಯ ಸಿಬ್ಬಂದಿ, ಆಝಾದ್ ನಗರದ 26 ಮಂದಿಗೆ, ಆಝಾದನಗರ, ಕೋಟೆಪುರದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.